ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಯುನೈಟೆಡ್ ಆಸ್ಪತ್ರೆಯಿಂದ ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಸಮಗ್ರ ಆರೋಗ್ಯ ತಪಾಸಣೆಗಳು

ಕಲಬುರಗಿ.ಮಾ.03:ಪ್ರತಿ ವರ್ಷ ಮಾರ್ಚ್ 8ನೇ ತಾರೀಖಿನಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೇ, ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳನ್ನೂ ಎತ್ತಿ ಹಿಡಿಯಲಾಗುತ್ತದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಫಘಾತ, ಆಘಾತ ಮತ್ತು ಗಂಭೀರ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಅತ್ಯಂತ ಉನ್ನತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದಕ್ಕೆ ಹೆಸರುವಾಸಿಯಾಗಿರುವ ಯುನೈಟೆಡ್ ಆಸ್ಪತ್ರೆಯು ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಸಮಗ್ರ ಆರೋಗ್ಯ ತಪಾಸಣಾ ಪರೀಕ್ಷೆಗಳನ್ನು ನೀಡುವ ಮೂಲಕ ಈ ಬಾರಿಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.
ವಿಶೇಷವಾಗಿ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಆರೋಗ್ಯ ತಪಾಸಣಾ ಪರೀಕ್ಷೆಗಳ ಪ್ಯಾಕೇಜ್ ಅನ್ನು ರೂಪಿಸಲಾಗಿದೆ. ಇದರಲ್ಲಿ ಮಧುಮೇಹ¸ ಸಂಪೂರ್ಣ ರಕ್ತಪರೀಕ್ಷೆ, ಥೈರಾಯ್ಡ್ ಹಾರ್ಮೋನ್ ಪರೀಕ್ಷೆ, ಸಂಪೂರ್ಣ ಕೊಲೆಸ್ಟ್ರಾಲ್ ಪರೀಕ್ಷೆ, ಯಕೃತ್ತು ಪರೀಕ್ಷೆ, ರಕ್ತದಲ್ಲಿ ಯೂರಿಯಾ ಅಂಶದ ಪರೀಕ್ಷೆ, ಕಿಡ್ನಿ ಪರೀಕ್ಷೆ, ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಂತಾದ ಪರರೀಕ್ಷೆಗಳು ಇರುತ್ತವೆ. ಇದರ ಜೊತೆಗೆ ನುರಿತ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ ಮತ್ತು ಊಟದಲ್ಲಿ ಪಾಲಿಸಬೇಕಾದ ಪತ್ತೆಗಳನ್ನು ಸೂಚಿಸುತ್ತಾರೆ. ಈ ಎಲ್ಲಾ ಪರೀಕ್ಷೆ ಮತ್ತು ಸಲಹೆಸೂಚನೆಗಳ ಒಟ್ಟು ಪ್ಯಾಕೇಜಿಗೆ ಮಹಿಳಾ ದಿನದ ಅಂಗವಾಗಿ ಕೇವಲ 499 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಮಹಿಳಾ ದಿನಾಚರಣೆಯ ಸಮಯದಲ್ಲಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಬಿಡುಗಡೆಯಾಗಲಿರುವ ಈ ವಿಶೇಷ ರಿಯಾಯಿತಿ ದರದ ಆರೋಗ್ಯ ಪರೀಕ್ಷಾ ಪ್ಯಾಕೇಜು ಏಪ್ರಿಲ್ 10ನೇ ತಾರೀಖಿನ ತನಕ ಜಾರಿಯಲ್ಲಿರುತ್ತದೆ.
ಜನರಲ್ಲಿ ಆರೋಗ್ಯ ಕುರಿತ ಜಾಗೃತಿ ಮತ್ತು ಸುರಕ್ಷತೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಯುನೈಟೆಡ್ ಆಸ್ಪತ್ರೆಯು ಅನೇಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬಂದಿದೆ. ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿರುವುದು, ಜನರಿಗೆ ಉಚಿತವಾಗಿ ಹೆಲ್ಮೆಟ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ನೀಡಿರುವುದು, ವಾಕಥಾನ್, ಸೈಕ್ಲಥಾನ್ ಮತ್ತು ಮ್ಯಾರಥಾನ್ ರೀತಿಯ ಜಾಗೃತಿ ಜಾಥಾ ನಡೆಸಿರುವುದು ಇವುಗಳಲ್ಲಿ ಪ್ರಮುಖವಾದವುಗಳು.
ಮಹಿಳಾ ದಿನದ ಅಂಗವಾಗಿ ನೀಡುತ್ತಿರುವ ಈ ವಿಶೇಷ ರೀಯಾಯಿತಿ ದರದ ಆರೋಗ್ಯ ಪರೀಕ್ಷೆಗಳೂ ಕೂಡ ಯುನೈಟೆಡ್ ಆಸ್ಪತ್ರೆಯ ಮಾನವೀಯ ಮತ್ತು ಸಾಮಾಜಿಕ ಚಟುವಟಿಕೆಗಳ ಮುಂದುವರಿದ ಭಾಗವಾಗಿದೆ. ಕಲಬುರಗಿ ನಗರದ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನಾನು ಅವರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಆ ಮೂಲಕ, ಅತ್ಯಂತ ಆಧುನಿಕ ಯಂತ್ರಗಳು ಹಾಗೂ ನವನವೀನ ತಂತ್ರಜ್ಞಾನಗಳಿಂದ ಸುಸಜ್ಜಿತವಾಗಿರುವ ಯುನೈಟೆಡ್ ಆಸ್ಪತ್ರೆಯ ಅತ್ಯಾಧುನಿಕ ಪ್ರಯೋಗಾಲಯದ ಪ್ರಯೋಜನವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಪಡೆದುಕೊಳ್ಳಬೇಕೆಂದು ಡಾ. ವೀಣಾ ಸಿದ್ದಾರೆಡ್ಡಿ
ನಿರ್ದೇಶಕರು ಹಾಗೂ ಹಿರಿಯ ನೇತೃತಜ್ಞರು,ಯುನೈಟೆಡ್ ಆಸ್ಪತ್ರೆ, ಕಲಬುರಗಿ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣಿಗಾಗಿ 08472-225006 ಮತ್ತು 08472-255006 ನಂಬರುಗಳಿಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.