ಅಂತರರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನ

ನಾಲಿಗೆ ತೊದಲು ಸಮಸ್ಯೆ ಇರುವವರು ನಿಯಮಿತವಾಗಿ ಬೆಟ್ಟದನಲ್ಲಿ ಕಾಯಿ, ಬಾದಾಮಿ, ಕರಿಮೆಣಸು, ಒಣ ಕರ್ಜೂರವನ್ನು ನಾಲಿಗೆಯಿಂದ ಚೀಪುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಉಪ್ಪನ್ನು ಕಲಸಿ ಪ್ರತಿದಿನ ನಾಲಿಗೆ ತಿಕ್ಕಿದರೆ ನಾಲಿಗೆ ತೊದಲುವಿಕೆ ಕಡಿಮೆಯಾಗುತ್ತದೆ. ಮಕ್ಕಳು ಸರಿಯಾಗಿ ಮಾತನಾಡದೆ ತೊದಲುತ್ತಿದ್ದರೆ ದಿನ ನಿತ್ಯ ಊಟದಲ್ಲಿ ಒಂದರಿಂದ ಎರಡು ಚಮಚ ದೇಸಿ ಹಸುವಿನ ತುಪ್ಪವನ್ನು ಹಾಕಿ ಊಟ ಮಾಡಿಸಿದರೆ ಕ್ರಮೇಣವಾಗಿ ಮಾತು ಸ್ಪಷ್ಟವಾಗುತ್ತದೆ.

1998 ರಿಂದ ಈ ದಿನವನ್ನು ಆಚರಣೆಗೆ ತರಲಾಯಿತು. ತೊದಲಿಕೆ ಬಗ್ಗೆ ಜಾಗೃತಿ ಮೂಡಿಸಲು ಅ ೨೨ ರಂದು ಈ ದಿನವನ್ನು ಆಚರಿಸಿಕೊಂಡು ಬರಲಾಗಿದೆ, ಈ ದಿನದಂದು ಸ್ವಸಹಾಯ ಗುಂಪುಗಳು ಮತ್ತು ರಾಷ್ಟ್ರೀಯ ಸಂಘಗಳು ಸಕ್ರಿಯವಾಗಿ ಮತ್ತು ಸೃಜನಶೀಲರಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಅಂತರರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವು 1995 ರಲ್ಲಿ ಸ್ವೀಡನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ತೊದಲುವಿಕೆ ಅಸೋಸಿಯೇಶನ್ (ISA) ಸಮ್ಮೇಳನದಲ್ಲಿ ಆರಂಭವಾಯಿತು. ಐಎಸ್ಎ ತನ್ನ ಆಶಯ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಇರಿಸಿದೆ. 1997 ರಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಲೂಯೆನ್ಸಿ ಕಾನ್ಫರೆನ್ಸ್ ಸಮಯದಲ್ಲಿ ತೊದಲುವವರಿಂದ ವೃತ್ತಿಪರರು ಕಲಿಯಲು ಒಂದು ದಿನವನ್ನು ಮೀಸಲಿಡಲಾಯಿತು. ಸಮಾರೋಪ ಸಮಾರಂಭದಲ್ಲಿ, ರಾಷ್ಟ್ರೀಯ ತೊದಲುವಿಕೆ ಯೋಜನೆಯ ಸಹ-ಸಂಸ್ಥಾಪಕ ಮೈಕೆಲ್ ಶುಗರ್‌ಮನ್, ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ದಿನವನ್ನು ಮೀಸಲಿಡಬೇಕು ಎಂದು ಹೇಳಿದರು. 1998 ರಲ್ಲಿ, ಯುರೋಪಿಯನ್ ಲೀಗ್ ಆಫ್ ತೊದಲುವಿಕೆಯ ಸಂಘಗಳು, ಅಂತರಾಷ್ಟ್ರೀಯ ಫ್ಲೂಯೆನ್ಸಿ ಅಸೋಸಿಯೇಷನ್ ಮತ್ತು ಅಂತಾರಾಷ್ಟ್ರೀಯ ತೊದಲುವಿಕೆ ಅಸೋಸಿಯೇಷನ್ ಅಕ್ಟೋಬರ್ 22 ರಂದು ಅಂತರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವಾಗಿ ಗೊತ್ತುಪಡಿಸಲಾಯಿತು.

ತೊದಲುವಿಕೆ ಸಾಮಾನ್ಯವಾಗಿ ಅನೇಕರಲ್ಲಿ ಕಂಡುಬರುವ ಲಕ್ಷಣ. ತೊದಲುವಿಕೆ ನಮ್ಮ ಆತಂಕದ ಒಂದು ವ್ಯಕ್ತತೆಯೇ ವಿನಃ ಇದು ರೋಗವಲ್ಲ. ಗಾಬರಿ ಅಥವಾ ಅಂಜಿಕೆಯಾದಾಗ ನಮ್ಮ ಕೈ ಕಾಲು ನಡುಗುವಿಕೆಯ ರೂಪದಲ್ಲಿ ಅಥವಾ ಮಲಮೂತ್ರ ವಿಸರ್ಜನೆ ರೂಪದಲ್ಲಿ ಭಯವನ್ನು ನಾವು ವ್ಯಕ್ತಪಡಿಸುವುದಿಲ್ಲವೇ, ಅದೇ ರೀತಿ ಅಡುಗೆ ಮನೆಯಲ್ಲಿ ತುಂಬಿಕೊಂಡಿರುವ ಹೊಗೆಯನ್ನು ಹೊರಹಾಕಲು ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದಾಗ ಆ ಹೊಗೆ ಯಾವರೀತಿ ಹೊರಹೋಗುತ್ತದೋ, ಹಾಗೆಯೇ ನಮ್ಮ ಆತಂಕ ಹಾಗೂ ದುಗುಡಗಳು ನಡುಕ, ತಲೆನೋವು, ವಿಸರ್ಜನೆ, ಸ್ನಾಯುಸೆಳೆತ ಹಾಗೂ ಇತರೆ ಅಂಗಾಂಗಗಳ ಪ್ರತಿಸ್ಪಂದನದ ಮೂಲಕವೂ ವ್ಯಕ್ತವಾಗುತ್ತದೆ. ಅದು ಗಂಟಲಿನ ಸ್ನಾಯುಗಳ ಮೂಲಕ ಪ್ರಕಟವಾದಾಗ ಅದನ್ನೇ ನಾವು ಗುಕ್ಕು ಅಥವಾ ಬಿಕ್ಕುವಿಕೆ ಅಥವಾ ತೊದಲುವಿಕೆ ಎಂದು ಕರೆಯುತ್ತೇವೆ.

ತೊದಲುವಿಕೆ ಹಲವಾರು ರೀತಿಯಲ್ಲಿ ಪ್ರಕಟವಾಗುತ್ತದೆ. ಮಾತು ಪ್ರಾರಂಭಿಸುವಾಗ ತೊಡಕಾಗುವುದು, ಸಂಭಾಷಿಸುವಾಗ ಮಧ್ಯೆ ಮಧ್ಯೆ ಉಚ್ಚಾರಣೆಗೆ ತೊಡಕಾಗುವುದು,ಕೆಲವೊಂದು ಕಠಿಣ ಶಬ್ದಗಳ ಉಚ್ಚಾರಣೆಗೆ ತೊಂದರೆಯಾಗುವುದು, ಸಂಭಾಷಣೆಯ ಗತಿಯನ್ನು ಮುಂದುವರಿಸಲು ತೊಡಕಾಗುವುದು ಹೀಗೆ ವಿವಿಧ ತೊದಲುವಿಕೆಯಿಂದಾಗಿ ವ್ಯಕ್ತಿ ನರಳಿ, ಖಿನ್ನತೆ ಅಥವಾ ಕೀಳರಿಮೆಯಿಂದ, ಚಿತ್ತಚಾಂಚಲತೆಯನ್ನು ಹೊಂದುತ್ತಾನೆ.

ನಾವು ತುಂಬಾ ಗಾಬರಿಯಾದಾಗ, ಸಭೆಯಲ್ಲಿ ಮಾತನಾಡುವಾಗ, ತಪ್ಪು ಮಾಡಿ ಸಿಕ್ಕಿಕೊಂಡಾಗ, ಆಕಸ್ಮಿಕ ಅವಘಡಗಳಿಗೆ ಸಿಲುಕಿದಾಗ, ವಿಚಲಿತರಾದಂತಾಗಿ ಸಾಮಾನ್ಯರಲ್ಲೂ ತೊದಲುವಿಕೆ ಕಾಣಿಸಿಕೊಳ್ಳುವುದುಂಟು. ವಯಸ್ಕರು ಬಲಭಾಗದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾಗಲೂ ಈ ತೊದಲುವಿಕೆ ಸರ್ವೇಸಾಮಾನ್ಯ.
ತೊದಲುವಿಕೆ ಅಥವಾ ಬಿಕ್ಕುವಿಕೆ ಹೆಚ್ಚಾಗಿ ಊಟಮಾಡುವಾಗ, ಮಲಗಿದೊಡನೆ, ಗಾಢ ನಿದ್ರೆಯಲ್ಲಿದ್ದಾಗ ಅಥವಾ ನಸುಕಿನಲ್ಲಿ ಏಳುವಾಗ ಕಂಡುಬರುತ್ತದೆ. ಇದರಿಂದಾಗಿ ಆಗಿಂದಾಗ್ಗೆ ತಲೆನೋವು ಕಂಡುಬಂದು, ಅದು ಹೆಚ್ಚಾಗಿ ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

ಚಿಕ್ಕಮಕ್ಕಳು ವಯೋಸಹಜವಾಗಿ ತಪ್ಪು ಮಾಡಿದಾಗ ನೀವು ಸಿಟ್ಟಿನಿಂದ ಹೊಡೆಯಲು ಪ್ರಯತ್ನಿಸಿದಾಗ, ಹೆದರಿಕೆಯಿಂದಾಗಿ ಅವರಲ್ಲಿ ತೊದಲುವಿಕೆ ಉಂಟಾಗುತ್ತದೆ. ಆಗ ನೀವು ಅವರನ್ನು ಮುದ್ದಿಸಲು ಪ್ರಾರಂಬಿಸಿದಾಗ,ಇದನ್ನೇ ಸದುಪಯೋಗ ಪಡಿಸಿಕೊಂಡು ಮಗು ನಿಮ್ಮ ಕೃಪೆಗಾಗಿ ಪದೇ ಪದೆ ಈ ರೀತಿ ಬಿಕ್ಕುವಿಕೆಯನ್ನು ರೂಢಿಸಿಕೊಳ್ಳುವುದರಿಂದ ಮುಂದೆ ಅದೇ ಅಭ್ಯಾಸವಾಗುವ ಸಂಭವವೂ ಇಲ್ಲದಿಲ್ಲ. ಆದ್ದರಿಂದ ಇಂತಹ ವಿಚಾರಗಳ ಕಡೆ ಪಾಲಕರು ಗಮನವಿಡುವುದು ಅವಶ್ಯ.

ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ. ಕಾರಣ ಇದಕ್ಕೆ ಸೂಕ್ತ ಚಿಕಿತ್ಸಾ ಕ್ರಮಗಳುಂಟು. ಇಂಥವರು ಸಮೀಪದ ಸ್ಪೀಚ್ ಥೆರಪಿಸ್ಟ್ ರನ್ನಾಗಲೀ ಅಥವಾ ಮನೋವೈದ್ಯರನ್ನಾಗಲೀ ಕಾಣುವುದು ಒಳಿತು. ಜೊತೆಗೆ ಉಚ್ಚಾರಣೆಯನ್ನು ಸರಳಗೊಳಿಸುವ ಕೆಲವೊಂದು ಸುಲಭ ಮಾತಿನ ಅಭ್ಯಾಸಗಳನ್ನು ರೂಢಿಸಿಕೊಂಡು ದಿನನಿತ್ಯ ಅಭ್ಯಾಸ ಮಾಡುವುದು. ಉಸಿರಾಟದ ಗತಿಯನ್ನು ನಿಯಂತ್ರಿಸುವ ಕಲೆಯನ್ನು ರೂಢಿಸಿಕೊಳ್ಳುವುದು. ಹಾಗೆಯೇ ದೀರ್ಘ ಕಾಲೀನ ಸೇವನೆಯ ಔಷಧಗಳನ್ನು ವೈದ್ಯರ ಸಲಹೆಯಂತೆ ಸೇವಿಸುವುದು, ಓದುವಾಗ ಹಾಗೂ ಸ್ನೇಹಿತರೊಂದಿಗೆ ಮಾತನಾಡುವಾಗ ದೊಡ್ಡ ಧ್ವನಿಯಲ್ಲಿ ಮಾತನಾಡುವುದರಿಂದ ನಿಮ್ಮ ತೊದಲುವಿಕೆಯನ್ನು ನೀವೇ ತಿದ್ದಿಕೊಳ್ಳಲು ಸಹಾಯಕವಾಗುತ್ತದೆ.