ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಿದ್ದತೆ: ಅಶೋಕ್ ಕಶ್ಯಪ್

ಬೆಂಗಳೂರು,ನ.18- ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ತಯಾರಿಗೆ ಪ್ರಾಶ್ಯಸ್ತ್ಯ ನೀಡಲಾಗುತ್ತಿದೆ ಎಂದು ಚಲನ ಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್‌ ಕಶ್ಯಪ್ ಇಂದಿಲ್ಲಿ ಹೇಳಿದ್ದಾರೆ.

ವರ್ಕ್‌ಶಾಪ್,ವಸ್ತು ಸಂಗ್ರಹಾಲಯ ಮುಂತಾದವುಗಳ ಕೆಲಸ ಆಗಬೇಕಾಗಿದೆ. ಹಿರಿಯ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ 100ನೇ ವರ್ಷದ ಹುಟ್ಟುಹಬ್ಬಕ್ಕೆ ಇವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ಹಾಕಲಾಗಿದೆ. ಇದಕ್ಕೆ ವಾಣಿಜ್ಯ ಮಂಡಳಿ ಬೆಂಬಲವಿದೆ ಎಂದರು.

ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಅವರು ಗೌರವ ಸ್ವೀಕರಿಸಿದ ಅಧ್ಯಕ್ಷರು ಮಾತನಾಡಿ ಹಿಂದೆ ಅಕಾಡೆಮಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೆ. ಈಗ ಅಧ್ಯಕ್ಷನಾಗಿ ಹೆಚ್ಚಿನ ಜವಬ್ದಾರಿ ನೀಡಿದ್ದಾರೆ. ಚಿತ್ರರಂಗಕ್ಕೆ ಹೊಸತನ ಕೊಡಬೇಕೆಂಬ ಗುರಿ ಇದೆ ಎಂದರು.

ಮೂರು ದಶಕ ಅವಧಿ ಸೇವೆ:

ಇದೇ ಸಂದರಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅವಿನಾಧ ಅವರನ್ನೂ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಅವಿನಾಶ್ ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಉಳಿದುಕೊಂಡಿದ್ದೇನೆ ಎಂದರೆ ಅದಕ್ಕೆ ನಿರ್ಮಾಪಕರು ಕಾರಣ .ಎಲ್ಲರ ಕಾರಣದಿಂದ ರಾಜೋತ್ಸವ ಪ್ರಶಸ್ತಿ ಲಭಿಸಿದೆ ಅಂತ ಖುಷಿ ಹಂಚಿಕೊಂಡರು.

ಸಮಾರಂಭದಲ್ಲಿ ಅಧ್ಯಕ್ಷ ಬಾ.ಮ.ಹರೀಶ್, ಮಾಜಿ ಅಧ್ಯಕ್ಷರುಗಳಾದ ಎಸ್.ಎ.ಚಿನ್ನೇಗೌಡ, ಥಾಮಸ್‌ಡಿಸೋಜ, ಬಸಂತ್‌ಕುಮಾರ್‌ಪಾಟೀಲ್, ಪದಾದಿಕಾರಿ ಸುಂದರ್‌ರಾಜ್, ಹಿರಿಯ ಛಾಯಾಗ್ರಾಹಕ ಬಸವರಾಜು ಮುಂತಾದವರು ಉಪಸ್ತಿತರಿದ್ದರು.