ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತುದಾರರಾಗಿ ಪೃಥ್ವಿಕಾಂತ್ ಎನ್. ಕೊಟಗಿ  ಆಯ್ಕೆ

ದಾವಣಗೆರೆ, ಮೇ ೬- ಇಂಟರ್‌ನ್ಯಾಷನಲ್ ರೋಲ್‌ಬಾಲ್ ಫೆಡರೇಷನ್ ವತಿಯಿಂದ ದಿ. 21 ರಿಂದ 26ರವರೆಗೆ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಾಳೇವಾಡಿ, ಪೂನಾದಲ್ಲಿ ಏರ್ಪಡಿಸಲಾಗಿದ್ದ 6ನೇ ರೋಲ್‌ಬಾಲ್ ವಿಶ್ವಕಪ್‌ನಲ್ಲಿ ನಗರದ ದಾವಣಗೆರೆ ಜಿಲ್ಲಾ ರೋಲ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ರೋಲ್‌ಬಾಲ್ ತರಬೇತುದಾರರಾದ ಪೃಥ್ವಿಕಾಂತ್ ಅವರು ಅಂತರಾಷ್ಟಿçÃಯ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇವರನ್ನು ತಂದೆ-ತಾಯಿ, ಸಹೋದರರು, ತರಬೇತುದಾರರಾದ ನಿರಂಜನಬಾಬು, ಸಹಪಾಠಿಗಳಾದ ಗಣೇಶ್ ಮತ್ತು ಭರತ್ ಇವರುಗಳು ಹೆಚ್ಚಿನ ಯಶಸ್ಸು ಲಭಿಸಲೆಂದು ಅಭಿನಂದಿಸಿದ್ದಾರೆ