ಅಂತರರಾಜ್ಯ ಮನೆ ಕಳ್ಳರ ಬಂಧನ ಹಣ ಆಭರಣ ವಶ. ವೆಂಕಟಪ್ಪ ನಾಯಕ

ಸಿಂಧನೂರು. ಏ.೭ ತಾಲ್ಲೂಕಿನ ಗೊರೇಬಾಳ ಕ್ಯಾಂಪ ಮನೆ ಕಳ್ಳತನ ಪ್ರಕರಣ ಸೇರಿದಂತೆ ಮಾನ್ವಿ. ಸಿರುಗುಪ್ಪ. ಆದೋನಿ ಯಲ್ಲಿ ಮನೆ ಕಳ್ಳತನ ಮಾಡಿದ ೩ ಜನ ಅಂತರರಾಜ್ಯ ಮನೆಗಳ್ಳರನ್ನು ಪೋಲಿಸರು ಬಂಧಿಸಿ ಅವರಿಂದ ಹಣ ಆಭರಣ ಹಾಗೂ ಮೋಟಾರ ಬೈಕನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವದಾಗಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾಹಿತಿ ನೀಡಿದರು.
ನಗರದ ಗ್ರಾಮೀಣ ಪೋಲೀಸ ಠಾಣೆಯ ಆವರಣದಲ್ಲಿ ಕಳುವಾದ ಹಣ ಆಭರಣ ಬೈಕ ಸಮೇತ ಆರೋಪಿಗಳ ಸಮ್ಮುಖದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು ಕಳವಾದ ಕಡಿಮೆ ಸಮಯದಲ್ಲಿ ಆರೋಪಗಳನ್ನು ಹಣ ಆಭರಣ ಗಳ ಸಮೇತ ಬಂಧಿಸಲಾಗಿದೆ ಎಂದರು.
ಶೇಷಗಿರಿ ರಾವ್ ಕೊಟ್ಟ ದೂರು ದಾಖಲಿಸಿಕೊಂಡು ಜಿಲ್ಲಾ ಎಸ್.ಪಿ. ಹೆಚ್ಚುವರಿ ಎಸ್.ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಸಿಪಿಐ ರವಿಕುಮಾರ ಗ್ರಾಮೀಣ ಠಾಣೆಯ ಪಿಎಸ್‌ಐ ಗಳಾದ ಮಾಲೀಕಸಾಹೇಬ. ಶಿವಶಂಕರ ಗೌಡ. ನಾಗಭೂಷಣ. ಸಿಬ್ಬಂದಿಗಳಾದ ಗೋಪಾಲ. ದ್ಯಾಮಣ್ಣ. ಶಿವಲಿಂಗಪ್ಪ. ದೇವರೆಡ್ಡಿ. ಶರಣಪ್ಪ. ಅಮರೇಶ. ಸಂಗನಗೌಡ. ಚಾಲಕ ಸಂಗಮೇಶ. ಸಿಡಿಆರ್ ಸೆಲ್ ಡಿಪಿಒ ರಾಯಚೂರು ಅಜೀಂ ಇವರ ನೇತೃತ್ವದಲ್ಲಿ ಕಳ್ಳರ ಪತ್ತೆಗಾಗಿ ತಂಡ ರಚನೆ ಮಾಡಲಾಗಿತ್ತು.
೬, ೪,೨೦೨೩ ರಂದು ನಾಗರಾಜ ತಂದೆ ಮಾರೆಣ್ಣ ಕೊರಚರು. ಉಲ್ಲೇಶ ತಂದೆ ಉಮ್ಮಣ್ಣ ಚಲವಾದಿ. ಶ್ರೀಕಾಂತ ತಂದೆ ಮಲ್ಲೇಶ ಯಳವರು .ಈ ೩ ಜನರು ಸಿರುಗುಪ್ಪ ತಾಲ್ಲೂಕಿನವರಾಗಿದ್ದು .ಈ ೩ ಜನ ಆರೋಪಿಗಳನ್ನು ಬಂದಿಸಿ ೧೯.೮೬ ಲಕ್ಷ ರೂ.ಗಳ ಆಭರಣಗಳು ೧೬ ಸಾವಿರ ನಗದ ಹಣ ಹತ್ತು ಸಾವಿರ ಮೌಲ್ಯದ ಬೆಳ್ಳಿ ಆಭರಣ ಮತ್ತು ಒಂದು ಮೋಟಾರ ಬೈಕ ವೊಂದನ್ನು ವಶಪಡಿಸಿಕೊಂಡಿದ್ದಾರೆ
ಕಡಿಮೆ ಸಮಯದಲ್ಲಿ ಶ್ರಮವಹಿಸಿ ಹಣ ಆಭರಣ ಸಮೇತ ಮನೆ ಕಳ್ಳರನ್ನು ಇಡಿದ ಪೋಲೀಸ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡದ ಕಾರ್ಯವನ್ನು ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ನಿಖಿಲ್. ಬಿ.ಹೆಚ್ಚುವರಿ ಎಸ್ ಪಿ ಶಿವಕುಮಾರ ಶ್ಲಾಘಿಸಿ.ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಸದರಿ ಕಳ್ಳತನ ಆರೋಪಿಗಳು ಸಿಂಧನೂರು ಸೇರಿದಂತೆ ಮಾನ್ವಿ ನಗರದ ಹಾಗೂ ಕೊಟ್ನಕಲ್ ಗ್ರಾಮದಲ್ಲಿ ಒಂದು ಕಳ್ಳತನ ಹಾಗೂ ಕಳವು ಯತ್ನ ಸೇರಿ ೩ ಪ್ರಕರಣಗಳು. ಸೇರಿ ಒಟ್ಟು ೫ ಪ್ರಕರಣಗಳಲ್ಲಿ ಬಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದು ಅಲ್ಲದೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ೬ ಪ್ರಕರಣ ಗಳು ಸೇರಿದಂತೆ ಅಂದ್ರದ ಆದೋನಿ ಯಲ್ಲಿ ಸಹ ಹಗಲು ಕನ್ನ ಕಳುವಿಗೆ ಯತ್ನ ಮಾಡಿದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದು ಪ್ರಕರಣ ಗಳು ಸಹ ದಾಖಲಾಗಿವೆ. ಎಂದು ತಿಳಿದು ಬಂದಿವೆ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ಪೋಲೀಸ ಇಲಾಖೆಯ ಪ್ರಕಟಣೆ ನೀಡಿದರು.
ಸಿಪಿಐ ರವಿಕುಮಾರ. ಪಿ.ಐ.ದುರುಗಪ್ಪ ಸೇರಿದಂತೆ ಪ್ರಕರಣ ಬೇದಿಸಿದ ತಂಡದ ಪೋಲೀಸ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.