
ಹಟ್ಟಿಚಿನ್ನದಗಣಿ: ತೆಲಂಗಾಣದ ಹೈದರಾಬಾದ ಹಾಗೂ ಪಟ್ಟಣ ಸೇರಿದಂತೆ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತರಾಜ್ಯ ಬೈಕ್ ಕಳ್ಳರನ್ನು ಹಟ್ಟಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡಸಾಗರ ಗ್ರಾಮದ ದೇವರಾಜ ಬುರಡೇರ್, ಮುಕ್ತುಂ ಮೋಮಿನ್, ಮೆಹಬೂಬ್ ಮೋಮಿನ್ ಬಂಧಿತ ಬೈಕ್ ಕಳ್ಳರಾಗಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ತನ್ನ ಬೈಕ್ ಕಳ್ಳತನವಾಗಿದೆ ಎಂದು ಗೌಡೂರು ಗ್ರಾಮದ ಅಮರಗುಂಡ ಎಂಬುವವರು ಮಾ.೧ ರಂದು ಸ್ಥಳೀಯ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಬೈಕ್ ಕಳ್ಳರನ್ನು ಭೇದಿಸಲು ಎಸ್‌ಪಿ ನಿಖಿಲ್.ಬಿ ತಂಡವೊಂದನ್ನು ರಚಿಸಿದ್ದರು. ಅಡಿಸನಲ್ ಎಸ್‌ಪಿ ಶಿವುಕುಮಾರ, ಡಿವೈಎಸ್‌ಪಿ ಮಂಜುನಾಥರ ಮಾರ್ಗದರ್ಶನದಲ್ಲಿ ತಂಡದ ನೇತೃತ್ವವಹಿಸಿಕೊಂಡ ಪಿಐ ಪ್ರಕಾಶ ಮಾಳಿ, ಪಿಎಸ್‌ಐ ಸುಬ್ಬಣ್ಣ, ಎಎಸ್‌ಐ ಶೇಖ ರೆಹಮಾನ್, ಸಿಬ್ಬಂದಿಗಳಾದ ನಾರಾಯಣ, ಬಸವರಾಜ, ಪರಸಪ್ಪ, ಹುಚ್ಚರೆಡ್ಡಿ, ಮರಿಯಪ್ಪ, ಶರಣಬಸವ, ಅಮರೇಶ, ವೆಂಕಟೇಶ, ನರಸಯ್ಯ, ಮಾರುತಿ, ಶರಣಬಸಪ್ಪ, ನಾಗಾರ್ಜುನ್, ಗಣಕಯಂತ್ರ ವಿಭಾಗದ ಅಜೀಂ, ಹೈದರಾಬಾದ್, ಹುನುಗುಂದ, ಮಸ್ಕಿ, ಲಿಂಗಸುಗೂರು ಸೇರಿದಂತೆ ನಾನಾ ಕಡೆ ಕಳ್ಳರಿಗಾಗಿ ಶೋಧ ನಡೆಸಿ ಬಂಧಿಸಿದ್ದಲ್ಲದೆ ಅವರಿಂದ ಅಂದಾಜು ೧೨ ಲಕ್ಷ ಮೌಲ್ಯದ ೧೭ ಬೈಕ್‌ಗಳನ್ನು ವಶಪಡಿಸಿಕೊಂಡು ಬಂಧಿತ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.