ಅಂತರರಾಜ್ಯ ಕಳ್ಳರ ಬಂಧನ : 8.59 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಅಥಣಿ :ಅ.7: ಅಥಣಿ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ತಾಲೂಕಿನ ವಿವಿಧಡೆ ನಡೆಯುತ್ತಿದ್ದ ಸರಗಳ್ಳತನ ಪ್ರಕರಣವನ್ನ ಬೇಧಿಸುವಲ್ಲಿ ಅಥಣಿ ಪೆÇೀಲಿಸರು ಯಶಸ್ವಿಯಾಗಿದ್ದಾರೆ. ಅಥಣಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್ ಹತ್ತುವ ಸಮಯದಲ್ಲಿ ಬ್ಯಾಗಿನಿಂದ ಮತ್ತು ಕೊರಳಲ್ಲಿ ಧರಿಸಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಳ್ಳರ ಪತ್ತೆಗಾಗಿ ಕಾರ್ಯಚರಣೆ ನಡೆಸಿದ್ದ ಅಥಣಿ ಪೆÇಲೀಸರು ಕಳೆದ ಬುಧವಾರ ದಿ. 4 ರಂದು ಸಂದೇಹದ ಮೇಲೆ ಇಬ್ಬರು ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದಾಗ ಮಹಾರಾಷ್ಟ್ರ ಮೂಲದ ಸೊಲ್ಲಾಪುರದ ಇಬ್ಬರು ಮಹಿಳೆಯರು ಅಥಣಿ ಬಸ್ ನಿಲ್ದಾಣದಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ಒಪ್ಪಿಕೊಂಡಿರುತ್ತಾರೆ.
ಬಂಧಿತ ಆರೋಪಿಗಳಿಂದ ಅಥಣಿ ಪೆÇಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳಲ್ಲಿ ಕಳುವಾದ ಸುಮಾರು 8 ಲಕ್ಷ 59 ಸಾವಿರ ರೂ. ಮೌಲ್ಯದ 150 ಗ್ರಾಂ ಚಿನ್ನಾಭರಣಗಳನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಎಸ್ಪಿ ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿ ಎಂ ವೇಣುಗೋಪಾಲ ಅವರ ನೇತೃತ್ವದಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ನಾಯಕತ್ವದಲ್ಲಿ ಅಪರಾಧ ವಿಭಾಗದ ಪಿಎಸ್‍ಐ ರಾಕೇಶ್ ಬಗಲಿ, ಅಥಣಿ ಪಿಎಸ್‍ಐ ಶಿವಾನಂದ ಕಾರಜೋಳ, ಹೆಚ್ಚುವರಿ ಪಿಎಸ್‍ಐ ಚಂದ್ರಶೇಖರ ಸಾಗನೂರ ಮುಂದಾಳತ್ವದಲ್ಲಿ ಸಿಬ್ಬಂದಿಗಳಾದ ಪಿ. ಬಿ ನಾಯಿಕ, ಎ ಎ ಈರಕರ, ಎಂ ಎ ಪಾಟೀಲ, ಜೆ. ಎಚ್ ಡಾoಗೆ, ಎಂ. ಎನ್. ಖೋತ, ಜೆ. ಆರ್ ಅಸೋದೆ, ಸವಿತಾ ಕತ್ತಿ ಮತ್ತು ವಿನೋದ ಠಕ್ಕನ್ನವರ ತಂಡವು ಕಳ್ಳರನ್ನ ಪತ್ತೆ ಹಚ್ಚುವಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಕ್ಕೆ ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ


ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣದಲ್ಲಿ ಅಂತರರಾಜ್ಯ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಅಥಣಿ ಪೆÇಲೀಸರ ತಂಡ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿರುವ ಚಿನ್ನಾಭರಣಗಳನ್ನು ಕಳೆದುಕೊಂಡ ಮಹಿಳೆಯರಿಗೆ ಹಸ್ತಾಂತರ ಮಾಡಲಾಗುವುದು. ಉತ್ತಮ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿರುವ ಪೆÇಲೀಸ್ ತಂಡಕ್ಕೆ ಪೆÇಲೀಸ್ ಇಲಾಖೆಯಿಂದ ಬಹುಮಾನ ನೀಡಲಾಗುವುದು.
– ಎಂ ವೇಣುಗೋಪಾಲ,
ಹೆಚ್ಚುವರಿ ಎಸ್ಪಿ ಬೆಳಗಾವಿ.