ಅಂತರಘಟ್ಟೆ ಕರಿಯಮ್ಮ ದೇವಿ ದೇವಾಲಯ ನಿರ್ಮಾಣ

ಹುಳಿಯಾರು, ಸೆ. ೩೦- ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಗಚೆಘಟ್ಟ ಗಡಿಯಲ್ಲಿ (ಬೇವಿನಹಳ್ಳಿ ಗೇಟ್) ನೆಲಸಿರುವ ಶ್ರೀ ಆದಿಶಕ್ತಿ ಅಂತರಘಟ್ಟೆ ಕರಿಯಮ್ಮ ದೇವಿಯವರು ಸುಮಾರು ೨೬ ಹಳ್ಳಿಯ ಗ್ರಾಮ ದೇವತೆಯಾಗಿದ್ದು ರಾಜ್ಯಾದ್ಯಂತ ಅಪಾರ ಭಕ್ತ ಸಮೂಹವನ್ನು ಒಳಗೊಂಡ ದೇವತೆಯಾಗಿದೆ. ಈ ದೇವಾಲಕ್ಕೆ ಸುಮಾರು ೮೦೦ ವರ್ಷಗಳ ಇತಿಹಾಸವಿದ್ದು ಭಕ್ತರ ಕಷ್ಟಗಳನ್ನು ನಿವಾರಿಸಿಕೊಂಡು ಬಂದಿರುವ ನಿದರ್ಶನವಿದೆ.
ಶ್ರೀ ಅಂತರಘಟ್ಟೆ ಕರಿಯಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಹಾಗೂ ಭಕ್ತರ ಸಮ್ಮುಖದಲ್ಲಿ ಪುರಾತನ ಇತಿಹಾಸವಿರುವ ದೇವಲಯವನ್ನು ವಿಸರ್ಜಿಸಲಾಯಿತು.
ಇದೇ ಜಾಗದಲ್ಲಿ ಸುಮಾರು ೯ ಕೋಟಿ ರೂ. ವೆಚ್ಚದಲ್ಲಿ ಭಕ್ತರು ನೀಡಿದ ದೇಣಿಗೆಯಿಂದ ನೂತನ ದೇವಾಲಯವನ್ನು ನಿರ್ಮಿಸಲಾಗುತ್ತಿದ್ದು ತಮಿಳುನಾಡಿನ ಖ್ಯಾತ ಶಿಲ್ಪಿಗಳಾದ ಕುಮಾರ್ ರವರ ಕೈಚಳಕದಿಂದ ದ್ರಾವಿಡ ಶೈಲಿಯಲ್ಲಿ ದೇವಸ್ಥಾನ ನಿರ್ಮಿಸಲಾಗುವುದು. ದೇವಾಲಯ ಅಷ್ಟಪಟ ವೇದಿಕೆ. ಮಹಾಮಂಟಪ ಪ್ರದಕ್ಷಿಣೆ ೪೮ ಶಿಲಾಸ್ತಂಭಗಳನ್ನು ಒಳಗೊಂಡ ವಾಸ್ತು ಪ್ರಕಾರ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ವಾಸ್ತು ಶಿಲ್ಪಿ ಹೇಮಂತ್ ತಿಳಿಸಿದರು.