ಅಂತರಗಂಗೆ ಕುಟುಂಬದ ಕಾರ್ಯ ಶ್ಲಾಘನೀಯ-ಪಂಪಯ್ಯ

ಮೌನ ತಪಸ್ವಿ ಪುಸ್ತಕ ಲೋಕಾರ್ಪಣೆ
ರಾಯಚೂರು,ಜು.೧೭- ಅಂತರಗಂಗಿ ಕುಟುಂಬ ಶರಣರ ಅಚಾರ ವಿಚಾರದಲ್ಲಿ ಅನುಭಾವ, ಕಾಯಕದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿ ಡಿಜಿಟಲ್ ಕಾಲದಲ್ಲಿ ಎಂಟು ಕೃತಿಗಳನ್ನು ಹೊರ ತಂದಿರುವುದು ಅವರ ಕಾರ್ಯ ಶ್ಲಾಘನೀಯ ಎಂದು ತಾಲೂಕು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷ ಪಂಪಯ್ಯ ಶಾಲಿಮಠ ಅವರು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಪವಿತ್ರ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ಆದ್ಯಾತ್ಮಿಕ ಪ್ರವಚನ ಆರ್ಶಿವರ್ಚನ ಕಾರ್ಯಕ್ರಮದಲ್ಲಿ ಮೌನ ತಪಸ್ವಿ ಪುಸ್ತಕ ಬಿಡುಗಡೆ ಯನ್ನು ಉದ್ದೇಶಿಸಿ ಮಾತನಾಡಿದ, ಅವರು ಧರ್ಮದ ಮರ್ಮ, ಮಾರ್ಗ ತೋರಿಸುವ ಸದ್ಗುಣ ತೋರಿಸುವಂತೆ ಶ್ರೇಷ್ಠ ತತ್ವ ತಿಳಿಸುವ ಶ್ರೇಷ್ಟ ಸಮ್ಮೇಳನ ಭಕ್ತಿಯಲ್ಲಿ ಅಪಾರ ಶ್ರೇಷ್ಟ ಬಸವಣ್ಣನವರ ವಚನದಂತೆ ನಡೆಯುತ್ತಾರೆ ಎಂದರು.
ಅನೇಕ ವರ್ಷಗಳಿಂದ ಅಂತರಗಂಗೆ ಕುಟುಂಬ ಬಸವಣ್ಣನ ವಚನದಂತೆ ನೀತಿ ನಿಯಮಗಳನ್ನು ಅನುಸರಿಸಿ ಧರ್ಮ ಪಾಲನೆ ಮಾಡುತ್ತ ಬಂದು ಸಮಾಜಕ್ಕೆ ಉನ್ನತ ಸೇವೆ ಸಲ್ಲಿಸಿದ್ದಾರೆ ಎಂದರು. ಕಾಶಿ ವಾರಾಣಸಿಯ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಎ.ಎಸ್ ಪಾಟೀಲ್ ಅವರು ಬರೆದಿರುವ ಮೌನ ತಪಸ್ವಿ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಶಿ ವಾರಾಣಸಿಯ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಸಾವಿರ ದೇವರ ಸಂಸ್ಥಾನ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನಿಲುಗಲ್ ರೇಣುಕಾ ಶಾಂತಮಲ್ಲ ಶಿವಾಚಾರ್ಯ, ಅಂತರಗಂಗೆ ಸಾಂಸ್ಕೃತಿಕ ಘಟಕದ ವೀರಭದ್ರಪ್ಪ ತಪಸ್ವಿ,ಮೌನ ತಪಸ್ವಿ ಲೇಖಕ ಎ. ಎಸ್ ಪಾಟೀಲ್, ಜಿ. ಪಂ ಮಾಜಿ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ಸೇರಿದಂತೆ ಉಪಸ್ಥಿತರಿದ್ದರು.