ಅಂತರಂಗದ ಚೇತನ ಕಂಡುಕೊಂಡಾಗ ಮಾತ್ರ ಭವಿಷ್ಯತದ ಬೆಳಕು ಸುಂದರ: ಎಸ್. ನಿಗಡಿ

ವಿಜಯಪುರ, ಏ.8-ಅಂತರಂಗದಲ್ಲಿ ಹುದುಗಿದ ಮಹಾನ್ ಅದಮ್ಯ ಚೇತನ ಕಂಡುಕೊಂಡಾಗ ಯುವಕರ ಭವಿಷ್ಯತದ ಬೆಳಕು ಸುಂದರ ಆಗುತ್ತದೆ ಎಂದು ಲೇಖಕ, ಕರ್ನಾಟಕ ಸರಕಾರದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸಂತೋಷಕುಮಾರ ಎಸ್. ನಿಗಡಿ ಹೇಳಿದರು.
ತಿಕೋಟಾ ತಾಲ್ಲೂಕಿನ ಜಾಲಗೆರಿ ಗ್ರಾಮದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಪೌಂದೇಷನ(ರಿ)ತಿಕೋಟಾ ಘಟಕ ಹಮ್ಮಿಕೊಂಡಿದ್ದ ಮನೆ ಮನಕ್ಕೂ ವಿವೇಕ ಅಭಿಯಾನ ಮತ್ತು ರಾಷ್ಟ್ರ ಜಾಗ್ರತಿ ಕಾರ್ಯಕ್ರಮವನ್ನು ಶ್ರೀ ಅಮೋಘ ಸಿದ್ದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಅವರು “ಸ್ವಾಮಿ ವಿವೇಕಾನಂದರ ಛಲ, ಹಠ, ಗುರಿ ಮುಟ್ಟುವವರೆಗೂ ನಿಲ್ಲದಿರು ಎಂಬ ಮಹತ್ವಾಕಾಂಕ್ಷೆ ದೇಶಾಭಿಮಾನ ಇಂದಿನ ಯುವ ಸಮುದಾಯಕ್ಕೆ ದಾರಿ ದೀಪ ಮತ್ತು ಸಾಧಿಸುವ ಮನಸು ಸ್ವಚ್ಛ ವಾಗಿದ್ದರೆ ಸಾಕು ಎಲ್ಲ ದಿಕ್ಕುಗಳಿಂದ ಸಹಕಾರ ಬಲ ಬರುತ್ತದೆ ಹಾಗೂ ನಮ್ಮ ಬದುಕಿನ ಏಳ್ಗೆಗೆ ನಾವೇ ಶ್ರಮಿಸಬೇಕಿದೆ ಅಂದಾಗ ಸಾಧನೆಯ ಉತ್ತುಂಗದಲ್ಲಿ ಸಂತೃಪ್ತಿಯ ಬಾವುಟ ಹಾರಾಡುತ್ತದೆ ಎಂದು ನಿಗಡಿಯವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಜಾಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭೀಮು ಚವ್ಹಾಣ ಅವರು ವಿವೇಕಾನಂದರು ಪ್ರಸ್ತುತ ದಿನಗಳಲ್ಲಿ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಯುವಕರು ಸಾಗಬೇಕು ಎಂದರು.
ವೇದಿಕೆ ಅಧ್ಯಕ್ಷ ಸ್ಥಾನವನ್ನು ಬಿ.ಡಿ. ಚವ್ಹಾಣ ಮುಖ್ಯೋಪಾಧ್ಯಾಯರು ಶ್ರೀ ಅಮೋಘಸಿದ್ದ ಪ್ರೌಢ ಶಾಲೆ ಜಾಲಗೇರಿ ಮಾತನಾಡಿ ಇಂದಿನ ದಿನಗಳಲ್ಲಿ ಯುವಕರು ಪುಸ್ತಕ ಪ್ರೇಮಿಗಳಾಗಬೇಕು. ಅತೀಯಾಗಿ ಮೊಬೈಲ್ ಬಳಕೆಯನ್ನು ಬಿಟ್ಟು ತಮ್ಮಲ್ಲಿರುವ ಆಸಕ್ತಿದಾಯಕ ಕಲೆಗಳಲ್ಲಿ ಮುಂದುವರೆಯಬೇಕು. ಆವಾಗ ಮಾತ್ರ ಯುವಕರ ಬದುಕಿಗೆ ಮೆರಗು ಬರುತ್ತದೆ. ಸಮಯದ ಸದುಪಯೋಗ ಶಿಸ್ತು, ಪರಿಪಾಲನೆ, ಹಿರಿಯರಿಗೆ ಗೌರವ, ಅವರ ಮಾರ್ಗದರ್ಶನದಲ್ಲಿ ನಡೆದಾಗ ಬದುಕು ಬಂಗಾರವಾಗಬಲ್ಲದು ಎಂದರು.
ತಾಲೂಕು ಘಟಕದ ಆಧ್ಯಕ್ಷರಾದ ಬೀರು ಗಾಡವೆ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಯುವ ವೇದಿಕೆ ತನ್ನದೆಯಾದಂತಹ ಶಿಸ್ತುಬದ್ಧ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಯುವಕರ ಸದ್ಭಳಕೆಯನ್ನು ಮಾಡಿಕೊಂಡು ಉತ್ತಮವಾದ ಸಾಮಾಜಿಕ ಸೇವೆಯನ್ನು ಮಾಡುತ್ತಿದೆ. ಮತ್ತೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸರಳವಾಗಿ ಸಾಗುತ್ತ ಮುನ್ನಡೆದಿದೆ ಎಂದರು.
ವೇದಿಕೆ ಮೇಲೆ ಫೂಲಸಿಂಗ್ ರಾಠೋಡ, ಯುವರಾಜ ಜಾಧವ, ವೀರನಗೌಡ ಬಿರಾದಾರ, ದುರ್ಗಣ್ಣ ವಡ್ಡರ, ಕಾಶೀನಾಥ ಚವ್ಹಾಣ, ರಾಚುಗೌಡ, ಸಿದ್ದು ಹಿರೇಮಠ ಇದ್ದರು.
ಈ ಕಾರ್ಯಕ್ರಮದಲ್ಲಿ ಮಿಥುನ ನಾಯಕ, ಅಕ್ಷಯ ರಾಠೋಡ, ಕಿರಣ ರಾಠೋಡ, ಮಿಥುನ ಚವ್ಹಾಣ, ಗೋಪಾಲ ಪವಾರ, ಸತೀಶ ರಾಠೋಡ ಉಮೇಶ ಗುಡಿಸಲಮನಿ, ಮುರುಗೇಶ ಕಾಳೆ, ನಾಗೇಶ ಕಾಳೆ ಮುಂತಾದವರು ಉಪಸ್ಥಿತರಿದ್ದರು.
ಶ್ರೀಮತಿ ಝಳಕಿ ನಿರೂಪಣೆ ಮಾಡಿದರು. ಸಿದ್ದು ಹಿರೇಮಠ ವಂದಿಸಿದರು.