ಅಂಜೆ ಕಚೇರಿಯಲ್ಲಿ ತ್ರೀವರ್ಣ ಧ್ವಜಗಳು ಅಂಚೆ ಸಿಬ್ಬಂದಿಗಳಿಂದ ಜಾಗೃತಿ ಜಾಥಾ

ಹೊಸಪೇಟೆ ಆ11: ಮನೆ ಮನೆಗೆ ತಿರಂಗಾ ಪ್ರತಿಮನೆಯಲ್ಲಿಯೂ ತಿರಂಗಾ ಎಂಬ ಕೇಂದ್ರಪುರಸ್ಕøತ ಯೋಜನೆಯಂತೆ ಬರುವ ಆಗಷ್ಟ 15 ರಂದು ಮನೆಯಲ್ಲಿ ಧ್ವಜರೋಹಣ ಮಾಡಿ ಎಂದು ಹೊಸಪೇಟೆಯ ಅಂಜೆ ಕಚೇರಿಯ ಸಿಬ್ಬಂದಿಗಳು ಜಾಗೃತಿ ಜಾಥವನ್ನು ಹಮ್ಮಿಕೊಂಡಿದ್ದರು.ತಮ್ಮ ದೈನಂದಿನ ಕೆಲಸಕ್ಕೆ ಬರುವ ಪೂರ್ವದಲ್ಲಿ ಎಲ್ಲಾ ಸಿಬ್ಬಂದಿಗಳು ಅಂಜೆ ಕಚೇರಿ ಹಾಗೂ ರಾಷ್ಟ್ರಧ್ವಜವನ್ನು ಹಿಡಿದು ಅಂಜೆ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗುತ್ತಿದ್ದು ಸಾರ್ವಜನಿಕರು ಪಡೆದು ಆಗಷ್ಟ 15 ರಂದು ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರೇರೇಪಿಸಲು ಮುಂದಾಗಿದ್ದು ಈ ಕುರಿತು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮಾಡಿದರು, ಪ್ರಧಾನ ಅಂಜೆ ಕಚೇರಿಯ ಸಿಬ್ಬಂದಿಗಳು ಪೋಸ್ಟ್‍ಮೇನ್‍ಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.