ಅಂಜೂರ ಹಣ್ಣಿನಿನ ಉಪಯೋಗಗಳು

ಅಂಜೂರ ಹಣ್ಣಿನ ಮೂಲ ಸ್ಥಾನ ಪಶ್ಚಿಮ ಏಷ್ಯಾದ ದಕ್ಷಿಣ ಅರೇಬಿಯಾ, ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಕಾಡು ಜಾತಿಯ ಅಂಜೂರವನ್ನು ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುತ್ತಿದ್ದರು. ಈ ಹಣ್ಣುಗಳು ತಿಳಿಹಸಿರು ಮಿಶ್ರಿತ ಕೆಂಪು ಬಣ್ಣ ಹೊಂದಿದ್ದು ಬಹಳ ಸಿಹಿಯಾಗಿರುತ್ತದೆ. ಇದರಲ್ಲಿರುವ ಸಕ್ಕರೆ ಅಂಶವು ತಾಜಾ ಹಣ್ಣಿನಲ್ಲಿ ಶೇಕಡಾ ೧೫ ಇದ್ದರೆ, ಒಣಗಿಸಿದ ಹಣ್ಣುಗಳಲ್ಲಿ ಶೇ. ೫೦ರಷ್ಟಿರುತ್ತದೆ. ಒಣಗಿದ ಅಂಜೂರವನ್ನು ಶೇಖರಿಸಿ ಸರದಂತೆ ಪೋಣಿಸಿ ಮಾರಾಟ ಮಾಡುವುದನ್ನು ನಾವೆಲ್ಲ ನೋಡಿರುತ್ತೀವಿ. ಆಮ್ಲದ ಅಂಶ ಅತಿ ಕಡಿಮೆ ಇರುವುದರಿಂದ ಇದು ಬಹಳ ಸಿಹಿಯಾಗಿರುತ್ತದೆ. ಸಿಹಿಯಲ್ಲಿ ಖರ್ಜೂರದ ನಂತರದ ಸ್ಥಾನ ಅಂಜೂರದ ಹಣ್ಣಿಗೆ ಇದೆ.
ಪೋಷಕಾಂಶಗಳು: ತೇವಾಂಶ, ಸಸಾರಜನಕ, ಕೊಬ್ಬು, ಶರ್ಕರಪಿಷ್ಠ, ನಾರಿನಾಂಶ, ಸುಣ್ಣ, ರಂಜಕ, ಕಬ್ಬಿಣ, ವಿಟಮಿನ್ ಎ ಮತ್ತು ಸಿ ಔಷಧೀಯ ಉಪಯೋಗಗಳು.
೧. ಕಫ ನಿವಾರಣೆಗೆ: ಕೆಮ್ಮು, ದಮ್ಮು ಇರುವವರು ಇದನ್ನು ಕೆಲವು ದಿನ ಪ್ರತಿನಿತ್ಯ ಸೇವಿಸಿವುದರಿಂದ ಕಫ ಹೊರಗೆ ಬರಲು ಸಹಾಯವಾಗುತ್ತದೆ.
೨. ಬಾಯಿಹುಣ್ಣಿಗೆ: ಹಾಲಿನಲ್ಲಿ ನೆನೆಸಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
೩. ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ: ಅಂತಹವರು ಆಗ್ಗಿಂದಾಗ್ಗೆ ಈ ಹಣ್ಣನ್ನು ಸೇವಿಸುವುದರಿಂದ ಅನುಕೂಲವಾಗುತ್ತದೆ.
೪. ಮೂಲವ್ಯಾಧಿಯಿಂದ ಬಳಲುವವರು: ರಾತ್ರಿ ೩-೪ ಅಂಜೂರದ ಹಣ್ಣನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ತಿಂದು ಹಾಲು ಕುಡಿದರೆ ಮೂಲವ್ಯಾಧಿ ಗುಣವಾಗುತ್ತದೆ.
೫. ಮಲಬದ್ಧತೆ: ನಾರಿನಾಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ.
೬. ಮಾಸಿಕ ಒತ್ತಡದಂತಹ ಸಮಸ್ಯೆಗೆ: ಈ ಹಣ್ಣು ಶರೀರದಲ್ಲಿ ಚೈತನ್ಯವನ್ನು ಉಂಟು ಮಾಡುತ್ತದೆ. ಒತ್ತಡ ಕಡಿಮೆ ಮಾಡಿ ನರನಾಡಿಗಳಲ್ಲಿ ಚೈತನ್ಯ ತುಂಬುತ್ತದೆ.
೭. ರಕ್ತವೃದ್ಧಿ: ರಕ್ತಹೀನತೆ ಇರುವವರು ಪ್ರತಿನಿತ್ಯ ೨-೨ ಹಣ್ಣುಗಳನ್ನು ಸೇವನೆ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ.
೮. ರೋಗನಿರೋಧಕ ಶಕ್ತಿ: ಇದರಲ್ಲಿ ವಿಟಮಿನ್ ಎ ಮತ್ತು ಸಿ ಅಧಿಕವಾಗಿರುವುದರಿಂದ ರೋಗ ಉತ್ತಮಗೊಳ್ಳುತ್ತದೆ.
೯. ದೈಹಿಕ ಶ್ರಮದಿಂದ ಕೆಲಸ ಮಾಡುವವರಿಗೆ: ಈ ಹಣ್ಣು ಸೇವನೆಯಿಂದ ಬಲವರ್ಧನೆ ಯಾಗುತ್ತದೆ.
೧೦. ಪಿತ್ತಕೋಶ: ಪಿತ್ತಕೋಶ ಜೋಪಾನ ಮಾಡುವಲ್ಲಿ ಈ ಹಣ್ಣಿನ ಕಾರ್ಯ ದೊಡ್ಡದು ಸಣ್ಣ ಗಾತ್ರದ ಈ ಹಣ್ಣು ಅತಿ ಉತ್ತಮವಾದದ್ದು ಮತ್ತು ಬಹಳ ಉಪಕಾರಿ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧