ಅಂಜು ವೆಡ್ಸ್ ನಸ್ರುಲ್ಲಾ

ನವದೆಹಲಿ, ಜೂ.೨೬- ಫೇಸ್ ಬುಕ್ ಸ್ನೇಹಿತ ನಸ್ರುಲ್ಲಾನನ್ನು ನೋಡಲು ಪಾಕಿಸ್ತಾನಕ್ಕೆ ತೆರಳಿದ್ದ ವಿವಾಹಿತ ಮಹಿಳೆ ಅಂಜು ಇದೀಗ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಫಾತಿಮಾ ಎಂದು ಬದಲಾಯಿಸಿಕೊಂಡು ನಸ್ರುಲ್ಲಾ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡು ಮಕ್ಕಳ ತಾಯಿಯಾದ ಭಾರತದ ೩೪ ವರ್ಷದ ಅಂಜು ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕಿಸ್ತಾನದ ೨೯ ವರ್ಷದ ನಸ್ರುಲ್ಲಾ ಎಂಬ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ ೨೦ ರ ರಂದು ನಾನು ಭಾರತಕ್ಕೆ ಬರುತ್ತೇನೆ. ನಸ್ರುಲ್ಲಾ ಅವರೊಂದಿಗೆ ವಿವಾಹವಾಗುವ ಯೋಜನೆ ಇಲ್ಲವೆಂದು ಮಾಧ್ಯಮಗಳಿಗೆ ಅಂಜು ಹೇಳಿದ್ದರು.
ನಸ್ರುಲ್ಲಾ ಕೂಡ ಅಂಜು ಜೊತೆ ವಿವಾಹವಾಗುವ ಯೋಚನೆ ಇಲ್ಲ. ನಾವು ಇಬ್ಬರು ೨೦೧೯ ರಿಂದ ಫೇಸ್ ಬುಕ್ ಸ್ನೇಹಿತರು ಅಷ್ಟೇ. ಅವರು ಶೀಘ್ರದಲ್ಲಿ ಅವರು ಭಾರತಕ್ಕೆ ಹೋಗಲಿದ್ದಾರೆ. ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಅಂಜು ಅವರ ಮನೆಯ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದರು.ಆದರೆ ತಾವೇ ನೀಡಿದ ಎಲ್ಲ ಹೇಳಿಕೆಯನ್ನು ಸುಳ್ಳು ಮಾಡಿ ಕ್ರಿಶ್ಚಿಯನ್ ಧರ್ಮದ ಅಂಜು ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡು ನಸ್ರುಲ್ಲಾನನ್ನು ವಿವಾಹವಾಗಿದ್ದಾಳೆ. ಇಬ್ಬರೂ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಅಪ್ಪರ್ ದಿರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ವಿವಾಹವಾದರು.
ಮದುವೆಯ ನಂತರ ನವಜೋಡಿ ಅಂಜು ವೆಡ್ಸ್ ನಸ್ರುಲ್ಲಾ ಎಂಬ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅಂಜು ಮತ್ತು ನಸ್ರುಲ್ಲಾ ಗಂಡ-ಹೆಂಡತಿಯಾಗಿ ಪರ್ವತ ದೇಶಗಳಲ್ಲಿ ತಿರುಗಾಡುವ ದೃಶ್ಯವಿದೆ.ಅಂಜು (೩೫) ಮತ್ತು ನಸ್ರುಲ್ಲಾ (೨೯) ಎಂಬುವರ ನಿಕಾಹ್ ನಿಜ ಎಂದು ಮಲಕಂದ ವಿಭಾಗದ ಉಪ ನಿರೀಕ್ಷಕ ನಾಸಿರ್ ಮೆಹಮೂದ್ ಸತ್ತಿ ತಿಳಿಸಿದ್ದಾರೆ., ನ್ಯಾಯಾಲಯದಲ್ಲಿ ವಿವಾಹವಾದ ನಂತರ ಅಂಜು ಅವರನ್ನು ಪೊಲೀಸ್ ಭದ್ರತೆಯಲ್ಲಿ ತನ್ನ ಗಂಡನ ಮನೆಗೆ ಕರೆದೊಯ್ಯಲಾಯಿತು ಎಂದು ವರದಿ ತಿಳಿಸಿದೆ.