
ಮಾನ್ವಿ,ಆ.೨೮ – ಇಂದಿನ ದಿನಗಳಲ್ಲಿ ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಅಗತ್ಯವಾದ ಟೈಲರಿಂಗ್ ಹಾಗೂ ಮೆಹೆಂದಿ ಸ್ವಯಂ ಉದ್ಯೋಗ ತರಬೇತಿಯನ್ನು ಸಂಸ್ಥೆಯು ಯಶಸ್ವಿಯಾಗಿ ನೀಡುವ ಮೂಲಕ ಅನೇಕ ಮಹಿಳೆಯರ ಜೀವನ ರೂಪಿಸುವಲ್ಲಿ ಸಹಕಾರ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಅಂಜುಮಾನ್ ಕಮೀಟಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಂಗ್ರೆಸ್ ನಾಯಕ ಎಂ ಈರಣ್ಣ ಹೇಳಿದರು.
ಪಟ್ಟಣದ ಫೈವ್ ಸ್ಟಾರ್ ಫಂಕ್ಷನ್ ಹಾಲ್‌ನಲ್ಲಿ ಗೌಸ್-ಓ-ಖ್ವಾಜಾ ಅಂಜುಮಾನ್ ಕಮೀಟಿಯ ೬ನೇ ವರ್ಷದ ವಾರ್ಷಿಕೊತ್ಸವ ಅಂಗವಾಗಿ ಸರ್ವಧರ್ಮ ಸಮಾಜ ಸೇವೆ ಕಾರ್ಯಕ್ರಮ ಹಾಗೂ ಸಂಸ್ಥೆಯಿಂದ ಟೈಲರಿಂಗ್ ಹಾಗೂ ಮೆಹೆಂದಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು
ನಂತರ ಕಮೀಟಿ ತಾ.ಅಧ್ಯಕ್ಷ ಸೈಯಾದ್ ಆರೀಫ್ ಖಾದ್ರಿ ಸಾಹೇಬ್ ಮಾತನಾಡಿ ಮೆಹಂದಿ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಜಿ ಹಂಪಯ ನಾಯಕ ,ಸೈಯಾದ್ ಕಾಲಿದ್ ಖಾದ್ರಿ,ಮೀರ್ ರಹೇಮತ್ ಅಲಿ.ಎ.ಕೆ.ಜಾಗರ?ದಾರ್, ರೇವ.ಫಾ.ಸುಂದರರಾಜ್ ಸಭಾಪಾಲಕರು ಮೆಥೋಡಿಸ್ಟ್ ಚರ್ಚ್, ವೀರಭದ್ರಪ್ಪ ಆಲ್ದಾಳ್,ಡಾ.ಅಂಬಿಕಾ ನಾಯಕ, ಮಿರ್ ರೆಹಮತ್ ಅಲಿ ಎ.ಕೆ. ಜಾಗಿರಾದಾರ್, ಸೈಯಾದ್ ಹುಸೇನ್ ಭಾಷ ಮೌಲ್ವಿಸಾಬ್, ಸೈಯಾದ್ ಖಲಿಲುಲ್ಲಾ ಖಾಜಿ ಸಾಬ್,ಮಹಮ್ಮದ್ ಇಲಿಯಾಸ್, ಸುನೀಲ್.ವಿ,ಮುಸ್ತಾಫಾ ಬಾಗಲಕೋಟೆ, ನಿಸಾರ್ ಅಹಮ್ಮದ್,ಸೈಯಾದ್ ಖಾದ್ರಿ ಸೇರಿದಂತೆ ಇನ್ನಿತರರು ಇದ್ದರು.