ಅಂಜುಮನ್ ಸಂಸ್ಥೆಯಿಂದ ಸಮ್ರೀನ್ ಗೆ ಸನ್ಮಾನ

ಅಥಣಿ ;ಜ.16: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2022-23 ರ ಕಾರ್ಯಕ್ರಮದಲ್ಲಿ ಪಟ್ಟಣದ ಉಲ್ಫತ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಸಮ್ರೀನ್ ಮುಲ್ಲಾ ಉರ್ದು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅಥಣಿ ತಾಲೂಕಿಗೆ ಹಾಗೂ ಶಾಲೆಗೆ ರಾಜ್ಯ ಮಟ್ಟದಲ್ಲಿ ಕೀರ್ತಿ ತಂದು ಹೆಮ್ಮೆಯ ಸಾಧನೆ ಮಾಡಿದ್ದಾಳೆ,
ಇಂದು ಪಟ್ಟಣದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ವತಿಯಿಂದ ಸಂಸ್ಥೆಯ ಕಾರ್ಯಾಲಯದಲ್ಲಿ ವಿಧ್ಯಾರ್ಥಿನಿ ಸಮ್ರೀನ್ ಮುಲ್ಲಾ ಇವಳನ್ನು ಸಂಸ್ಥೆಯ ಅಧ್ಯಕ್ಷ ಸೈಯದ್ ಅಮೀನ್ ಗದ್ಯಾಳ ಇವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು,
ಈ ವೇಳೆ ಸಂಸ್ಥೆಯ ಅಧ್ಯಕ್ಷ ಸೈಯದ್ ಅಮೀನ್ ಗದ್ಯಾಳ, ಸಲೀಮ್ ದ್ರಾಕ್ಷಿ, ಆಬೀದ ಮಾಸ್ಟರ್, ಸೈಯದ್ ಗಡ್ಡೇಕರ, ರಿಯಾಜ್ ಸನದಿ, ಇಲಿಯಾಸ್ ಹಿಪ್ಪರಗಿ, ಜುಬೇರ್ ನಾಲಬಂದ, ಇಮ್ರಾನ್ ಪಟಾಯತ್, ಬೋಲಾ ನಾಲಬಂದ, ಅಜರ ಮುಲ್ಲಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು,