ಅಂಜುಮನ್ ಚುನಾವಣೆ: ನಾಮಪತ್ರ ಸಲ್ಲಿಕೆ

ಸವಣೂರ,ಮಾ16: ನಗರದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ತೆರವಾದ ಸದಸ್ಯರ ಸ್ಥಾನಗಳಿಗೆ ಮಾ. 30 ರಂದು ಚುನಾವಣೆ ನಿಗಧಿಯಾಗಿದ್ದು, ನಾಮ ಪತ್ರ ಸಲ್ಲಿಸಲು ಆರಂಭದ ದಿನವಾದ ಒಂದೇ ದಿನಕ್ಕೆ 21 ನಾಮ ಪತ್ರಗಳನ್ನು ಸಲ್ಲಿಕೆಯಾಗಿವೆ.

ನಾಮ ಪತ್ರ ಅರ್ಜಿ ಸಲ್ಲಿಸಲು ಮಾರ್ಚ 22 ಕೊನೆಯ ದಿನವಾಗಿದ್ದರಿಂದ ನಗರದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ ಖುದ್ದೂಸ್ ತಂಡದ 21 ಸದಸ್ಯರು ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಾದ ಕೆ.ಜಿ ಸಿಂಪಿ ಹಾಗೂ ಎ.ಕೆ ಬಿಸಲಹಳ್ಳಿ, ಅಭ್ಯರ್ಥಿಗಳಾದ ಜೀಶಾನ್‍ಖಾನ್ ಪಠಾಣ್, ಮೊಹಮ್ಮದ ಯೂಸುಫ್ ಫರಾಶ್ ನನ್ನೆಮಿಯ್ಯ ಬನ್ನೂರ, ಅಮ್ಜದ್ ಖಾನ ಪಠಾಣ, ಅಬ್ದುಲ್ ವಾಹಿದ್ ಪರಾಶ್, ಮೊಹ್ಮದ ರಫಿಕ್ ಬಳ್ಳಾರಿ, ಚಮನ್‍ಸಾಬ್ ಮನಿಯಾರ, ಅಬ್ದುಲ್ ಗಫಾರ್ ಹುದೂದ್ ಕರೀಮ್‍ಖಾನ್ ಮುನೀಮಖಾನ್‍ವರ್, ಅಜ್ಮತ್‍ಉಲ್ಲಾಖಾನ್ ಅಳ್ನಾವರ್, ಅಲ್ತಾಫ್ ಬೇಪಾರಿ, ರಿಯಾಜ್‍ಅಹ್ಮದ ಗೌಡಗೇರಿ, ಅಹ್ಮದ ಬಾಷಾ ಮಾಸನಕಟ್ಟಿ, ಮುನ್ವರ್ ಬೇಗ್ ಮಿರ್ಜಾ, ಅಲ್ಲಾವುದ್ದೀನ ಚೋಪ್ದಾರ್, ರಸೂಲ್‍ಖಾನ್ ಹೆಸರೂರ, ಖಾಜಾಮೈನುದ್ದೀನ್ ಬಿಜಾಪೂರ, ಮಜೀದ್‍ಖಾನ್ ಪಠಾಣ, ಅಬ್ದುಲ್‍ರೆಹಮಾನ್ ದುಕಾಂದಾರ್, ಹುಸೇನ್‍ಪೀರಾ ಮಕಾಂದಾರ್, ಅಬ್ದುಲ್ ರೆಹಮಾನ್ ಕರ್ಜಗಿ ಸೇರಿದಂತೆ ಇತರರು ಇದ್ದರು.