ಅಂಜುಮನ್ ಖಿದ್ಮತೆ ಇಸ್ಲಾಂ ನಿಂದ ಸೇವಾ ಕೇಂದ್ರ ಉದ್ಘಾಟನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ4:  ಸಮುದಾಯದ ಅನುಕೂಲಕ್ಕಾಗಿ ಕಾಮನ್ ಸರ್ವಿಸ್ ಸೆಂಟರ್ ಆರಂಭಿಸುವ ಮೂಲಕ ಸರ್ಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ತಲುಪಿಸಲು ಅಂಜುಮನ್ ಖಿದ್ಮತೆ ಇಸ್ಲಾಂ ಕೇಂದ್ರ ಆರಂಭಿಸಿದೆ ಸಾರ್ವಜನಿಕರು ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಹೊಸಪೇಟೆ ಡಿಪೋ ಬಳಿಯ ಅಂಜುಮನ್ ಶಾದಿಮಹಲ್ ಕಚೇರಿ ಆವರಣದಲ್ಲಿ ಕಾಮನ್ ಸರ್ವಿಸ್ ಸೆಂಟರ್‍ಗೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರಿ ಸೌಲಭ್ಯಗಳು ಸರ್ಕಾರದಿಂದ ಮಾತ್ರ ತಲುಪುವಂತೆ ಮಾಡಲು ಸಾಧ್ಯವಿಲ್ಲಾ ಸರ್ಕಾರೇತರ ಸಂಸ್ಥೆಗಳು ಸಹ ಕೈಜೊಡಿಸಬೇಕಾಗಿದ್ದು ಅಂದಾಗ ಮಾತ್ರ ಸುಲಭವಾಗಿ ಸೇವೆ ಪಡೆಯಲು ಸಾಧ್ಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಮಾಡಿದ ಕಾರ್ಯ ಶ್ಲಾಘನೀಯ ಎಂದರು.
ಇದೆ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶರಿಯತ್ ನ್ಯಾಯಾಲಯ ಉದ್ಘಾಟನೆ ಹಾಗೂ ಉಚಿತ ಕಂಪ್ಯೂಟರ್ ತರಬೇತಿ ಪಡೆದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ಸಹ ವಿತರಿಸಲಾಯಿತು.
ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದಿವಾಕರ್‍ರವರ ಸೇವೆ ಸ್ಮರಿಸಿದ ಅಂಜುಮನ್ ಕಮಿಟಿಯಿಂದ ಸನ್ಮಾನಿಸಿ ಹೀಗೆಯೇ ಸಮಾಜಮುಖಿ ಸೇವೆ ಮುಂದುವರೆಯಲಿ ಎಂದು ಸನ್ಮಾನಿಸಲಾಯಿತು.
ಮುಖಂಡರಾದ ರಾಮನಗೌಡ, ರಫಿಕ್ ಯಂಕಪ್ಪ, ಗೌರೀಶ್, ನಜ್ಮುನ್, ಆರೀಫಾ ಬ್ಯಾಟರಿ ಅತೀಕ್, ಹಾಗು ಅಂಜುಮನ್ ಕಮಿಟಿಯ ಉಪಾಧ್ಯಕ್ಷ  ಎಮ್ ಫಿರೋಜ್ ಖಾನ್, ಕಾರ್ಯದರ್ಶಿ ಎಮ್.ಡಿ.ಅಬೂಬಕ್ಕರ್, ಖಾಜಾಂಚಿ ಜಿ. ಅನ್ಸರ್ ಭಾಷ, ಸಹಕಾರ್ಯದರ್ಶಿ  ಡಾ.ಎಮ್.ಡಿ. ದುರ್ವೇಶ್ ಮೈನುದ್ದಿನ್ ಸದ್ಯಸರುಗಳಾದ  ಕೋತ್ವಾಲ್ ಮೊಹಮ್ಮದ್ ಮೋಸಿನ್ ಸದ್ದಾಮ್ ಹುಸೇನ್, ಎಲ್. ಗುಲಾಮ್ ರಸೂಲ್ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲಕರು ಪೋಷಕರು ಸಮುದಾಯದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

One attachment • Scanned by Gmail