ಅಂಜುಮನ್ ಏ ಇಸ್ಲಾಂ ಸಂಸ್ಥೆ ಚುನಾವಣೆ ಫಲಿತಾಂಶ

ಸವಣೂರ,ಮಾ31: ಸವಣೂರ ನಗರದ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ತೆರವಾದ 21 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಿತು.
ತಡರಾತ್ರಿಯವರೆಗೂ ನಡೆದ ಮತ ಎಣಿಕೆಯಲ್ಲಿ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿ ಅಲ್ಲಖುದ್ದೂಸ್ ತಂಡವು ಆಡಳಿತ ಮಂಡಳಿಗೆ ಬೇಕಿರುವ 21 ಸ್ಥಾನಗಳಲ್ಲಿಯೂ ಸಹ ಜಯಭೇರಿ ಬಾರಿಸಿದ್ದು, ಎದುರಾಳಿ ಅಮನ ತಂಡಕ್ಕೆ ಭಾರಿ ಮುಖಭಂಗವಾಗಿದೆ.
ಅಲ್ಲಖುದ್ದೂಸ್ ತಂಡದ ನಾಯಕ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಜೀಶಾನ ಅಮಹ್ಮದಖಾನ ಪಠಾಣ ಎಲ್ಲ ಸದಸ್ಯರಿಗಿಂತಲೂ ಹೆಚ್ಚಿನ ಮತವನ್ನು ಪಡೆದು ಅಜೇಯರಾಗಿ ಉಳಿದುಕೊಂಡು ಮತ್ತೆ ಸಂಸ್ಥೆಯ ಅಧ್ಯಕ್ಷರಾಗಲಿದ್ದಾರೆ.
ತಂಡದ ಅಭ್ಯರ್ಥಿಗಳಾದ ಮೊಹ್ಮದ ಯೂಸುಫ್ ಫರಾಶ್, ನನ್ಹೆಮಿಯಾ ಬನ್ನೂರ, ಅಮ್ಜದ್‍ಖಾನ ಪಠಾಣ, ಅಬ್ದುಲ್ ವಾಹಿದ್ ಫರಾಶ, ಮೊಹಮ್ಮದ ರಫಿಕ್ ಬಳ್ಳಾರಿ, ಚಮನಸಾಬ್ ಮನಿಯಾರ, ಅಬ್ದುಲ್ ಗಫಾರ್ ಹುದೂದ, ಕರೀಮಖಾನ ಮುನೀಮ್‍ಖಾನವರ, ಅಜ್ಮತಉಲ್ಲಾಖಾನ್ ಅಳ್ನಾವರ, ಅಲ್ತಾಫ್ ಬೇಪಾರಿ, ರಿಯಾಜ್ ಅಹ್ಮದ ಗೌಡಗೇರಿ, ಅಹ್ಮದ ಬಾಷಾ ಮಾಸನಕಟ್ಟಿ, ಮುನ್ವರಬೇಗ್ ಮಿರ್ಜಾ, ಅಲ್ಲಾವುದ್ದೀನ ಚೋಪದಾರ, ರಸೂಲ್‍ಖಾನ ಹೆಸರೂರ, ಖಾಜಾ ಮೈನುದ್ದೀನ ಬಿಜಾಪುರ, ಮಜೀದಖಾನ್ ಪಠಾಣ, ಅಬ್ದುಲ್‍ರೆಹಮಾನ ದುಕಾನದಾರ, ಹುಸೇನ್‍ಪೀರಾಂ ಮಕಾಂದಾರ, ಅಬ್ದುಲ್ ರೆಹಮಾನ್ ಕರ್ಜಗಿ ಜಯಗಳಿಸಿದ್ದಾರೆ.
ಮಂಗಳವಾರ ನಡೆದ ಚುನಾವಣೆಯಲ್ಲಿ 6216 ಮತದಾರರ ಪೈಕಿ 5791 ಮತದಾರು ತಲಾ 21 ಮತಗಳನ್ನು ಚಲಾಯಿಸಿದರು.
ಚುನಾವಣೆ ಕಾರ್ಯದಲ್ಲಿ ಆಡಳಿತಾಧಿಕಾರಿ ಚಂದ್ರಮೋಹನ ಭಂಗಿ, ಚುನಾವಣಾಧಿಕಾರಿ ಕೆ.ಜಿ ಸಿಂಪಿ, ಸಹಾಯಕ ಚುನಾವಣಾಧಿಕಾರಿ ಅಡವಿಬಸಪ್ಪ ಬಿಸಲಳ್ಳಿ, ಸೇರಿದಂತೆ ಸುಮಾರು 70 ಜನ ಚುನಾವಣಾ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು. ಶಿಕ್ಷಕ ವಿದ್ಯಾಧರ ಕುತನಿ ಫಲಿತಾಂಶ ಪ್ರಕಟ ಕಾರ್ಯ ನಿರ್ವಹಿಸಿದರು. ಆರಕ್ಷಕ ನಿರೀಕ್ಷ ಶಶಿಧರ ಜಿ.ಎಂ ಸೂಕ್ತ ಬಂದೊಬಸ್ತ್ ಒದಗಿಸಿದ್ದರು.