ಅಂಜುಮನ್ ಎ ಇಸ್ಲಾಂ ಕಮಿಟಿಯಿಂದ ಹಜ್ ಯಾತ್ರಿಗಳಿಗೆ ಸನ್ಮಾನ

ಅಥಣಿ :ಮೇ.29: ತಾಲೂಕಿನ ಅಂಜುಮನ್ ಎ ಇಸ್ಲಾಂ ಕಮಿಟಿ ವತಿಯಿಂದ ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು,
ಈ ಸಂದರ್ಭದಲ್ಲಿ ಮುಫ್ತಿ ಹಬೀಬುಲ್ಲಾ ಕಾಸ್ಮಿ ಮಾತನಾಡಿ ಹಜ್ ಯಾತ್ರಾರ್ಥಿಗಳು ಪವಿತ್ರ ಹಜ್ ಯಾತ್ರೆಯ ಸಂದರ್ಭದಲ್ಲಿ ಅಲ್ಲಾಹನಿಗೆ ಪ್ರಾರ್ಥನೆ ಹೇಗೆ ಸಲ್ಲಿಸಬೇಕು ಹಾಗೂ ಅಲ್ಲಿ ಅನುಸರಿಸಬೇಕಾದ ನಿಯಮಗಳು ಮತ್ತು ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು,
ಈ ವೇಳೆ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಸೈಯದಅಮೀನ್ ಗದ್ಯಾಳ ಮಾತನಾಡಿ ಹಜ್ ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳಲ್ಲಿ ಒಂದಾಗಿದೆ, ಇಸ್ಲಾಂ ಧರ್ಮದಲ್ಲಿ ಹಜ್? ಯಾತ್ರೆ ಮಾಡುವುದಕ್ಕೇ ಅದರದೇ ಆದ ಮಹತ್ವವಿದೆ. ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಹಜ್ ಯಾತ್ರೆಗೆ ಹೋಗಿ ಬರಬೇಕೆಂದುಕೊಳ್ಳುತ್ತಾನೆ. ಈ ಅವಕಾಶ ಎಲ್ಲ ಇಸ್ಲಾಂ ಧರ್ಮದವರಿಗೆ ಅಲ್ಲಾಹ ಕರುಣಿಸಲಿ ಎಂದು ಪ್ರಾರ್ಥಿಸಿದರು,
ಹಜ್ ಯಾತ್ರೆಗೆ ಹೊರಟ ಇಮಾಮಸಾಹೇಬ ಬಿರಾದಾರ, ಗುಲಾಬಹುಸೇನ್ ಮುಲ್ಲಾ, ಅತಾವುಲ್ಲಾ ಮುಲ್ಲಾ, ಫೈಜುಲ್ಲಾ ಮುಲ್ಲಾ, ದಸ್ತಗೀರ ಮುಜಾವರ, ರಸೂಲಸಾಬ ಜಮಾದಾರ, ಕೈಯೋಮ್ ಮುಜಾವರ, ಉಮರ ಪಟೇಲ್, ದಾವಲಸಾಬ ಹಕೀಮ್, ಇಮ್ತಿಯಾಜ್ ಮೋಮಿನ್, ಮೈನೋದ್ದಿನ್ ಪಠಾಣ, ಇವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು,

ಈ ವೇಳೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸೈಯದಅಮೀನ್ ಗದ್ಯಾಳ, ಸದಸ್ಯರಾದ ಇಲಿಯಾಸ್ ಹಿಪ್ಪರಗಿ, ಖಲೀಲ್ ಬಾಗವಾನ್, ಅಮಾನುಲ್ಲಾ ಮುಲ್ಲಾ, ಇಮ್ರಾನ್ ಪಟಾಯಿಟ್, ಮಕ್ಸೂದ್ ಮುಲ್ಲಾ, ಧರ್ಮ ಗುರುಗಳಾದ ಮುಫ್ತಿ ಹಬೀಬುಲ್ಲಾ ಕಾಸ್ಮಿ, ಇಸ್ಲಾಹುಲ್ ಬನಾತ್ ಮದರಸಾದ ಮೌಲಾನಾ ಇಸಾಕ್, ಮೌಲಾನಾ ಆಸೀಫ್ ಪಟಾಯಿತ್, ಮೌಲಾನಾ ಸೋಹೆಲ್ ಹೇರವಾಡೆ, ಮೌಲಾನಾ ಫಾರುಕ್ ಪಟಾಯಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು,