ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ಅಥಣಿ :ಮಾ.16: ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮಿಟಿಯ ವತಿಯಿಂದ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಬಡ ಹಾಗೂ ನಿರ್ಗತಿಕ ಮುಸ್ಲಿಂ ಸಮಾಜದ ಸುಮಾರು 500 ಕುಟುಂಬಗಳಿಗೆ ಪವಿತ್ರ ರಂಜಾನ್ ಹಬ್ಬದ ಸಲುವಾಗಿ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಸಯ್ಯದಅಮೀನ ಗದ್ಯಾಳ ಮಾತನಾಡಿ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಈ ಹಬ್ಬವು ದಾನ-ಧರ್ಮಗಳ ಪ್ರತೀಕವಾಗಿರುವ ಹಬ್ಬವಾಗಿದೆ ನಾವು ಅಥಣಿ ಅಂಜುಮನ್ ಎ ಇಸ್ಲಾಂ ಕಮಿಟಿಯ ಸರ್ವ ಸದಸ್ಯರ ಒಮ್ಮತದ ಒಪ್ಪಿಗೆಯ ಮೇರೆಗೆ ಪಟ್ಟಣದಲ್ಲಿರುವ ಸುಮಾರು 500 ಬಡ ಕುಟುಂಬಗಳಿಗೆ ರಂಜಾನ್ ಹಬ್ಬಕ್ಕೆ ಬೇಕಾಗುವ ಎಲ್ಲ ಆಹಾರ ಸಾಮಗ್ರಿಗಳನ್ನು ಸೇರಿಸಿ ಕಿಟ್ ಸಿದ್ದ ಮಾಡಿ ವಿತರಣೆ ಮಾಡಿದ್ದೇವೆ ಮುಂದೆಯೂ ಕೂಡ ಇನ್ನೂ ಹೆಚ್ಚು ಕಿಟ್ ಗಳನ್ನು ವಿತರಿಸುವ ಗುರಿ ಇಟ್ಟಿದ್ದೇವೆ. ಬರುವ ದಿನಮಾನಗಳಲ್ಲಿ ಮುಸ್ಲಿಂ ಸಮುದಾಯದ ಏಳಿಗೆಗಾಗಿ ಅಂಜುಮನ್ ಎ ಇಸ್ಲಾಂ ಕಮಿಟಿ ವತಿಯಿಂದ ಎಲ್ಲ ರೀತಿಯ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದರು ಎಂದರು.
ಈ ವೇಳೆ ಅಂಜುಮನ್ ಎ ಇಸ್ಲಾಂ ಕಮಿಟಿ ಕಾರ್ಯದರ್ಶಿ ಖಲೀಲ ಬಾಗವಾನ ಮಾತನಾಡಿ ಅಂಜುಮನ್ ಎ ಇಸ್ಲಾಂ ಕಮಿಟಿ ವತಿಯಿಂದ ಬಡ ಮುಸ್ಲಿಂ ಕುಟುಂಬಗಳಿಗೆ ರಂಜಾನ್ ಅಂಗವಾಗಿ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಇದರ ಜವಾಬ್ದಾರಿಯನ್ನು ಕೂಡಾ ಕಮಿಟಿಯ ಸದಸ್ಯರಿಗೆ ವಹಿಸಲಾಗಿದೆ ಆದ ಕಾರಣ ಪಟ್ಟಣದಲ್ಲಿರುವ ಬಡವರು, ವಿಧವೆಯರು ಹಾಗೂ ನಿರ್ಗತಿಕ ಕುಟುಂಬಸ್ಥರು ಕಮಿಟಿಯ ಸದಸ್ಯರ ಹತ್ತಿರ ಕೂಪನ್ ಪಡೆದುಕೊಂಡು ಅಂಜುಮನ್ ಕಮಿಟಿಯ ಕಾರ್ಯಾಲಯಕ್ಕೆ ಭೇಟಿ ನೀಡಿ ಕೂಪನ್ ಕೊಟ್ಟು ಕಿಟ್ ಪಡೆದುಕೊಳ್ಳಬೇಕು ಹಾಗೂ ಸಮಾಜದ ಎಲ್ಲ ಭಾಂದವರು ಸಂಭ್ರಮ ಸಡಗರದೊಂದಿಗೆ ಅರ್ಥಪೂರ್ಣವಾಗಿ ರಂಜಾನ್ ಹಬ್ಬವನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಮಿಟಿ ಉಪಾಧ್ಯಕ್ಷ ಜುಬೇರ್ ನಾಲಬಂದ, ಅಮಾನುಲ್ಲಾ ಮುಲ್ಲಾ, ಆಬೀದ ಮಾಸ್ಟರ, ಇಲಿಯಾಸ ಹಿಪ್ಪರಗಿ, ಇಮ್ರಾನ ಪಟಾಯಿತ, ಅಬ್ದುಲಅಜೀಜ ಮುಲ್ಲಾ, ಅಬೂಬಕರ ಕೊಕಟನೂರ, ರಿಯಾಜ ಸನದಿ, ಬಾಬು ಖೇಮಲಾಪೂರ, ಸಯ್ಯದ ಗಡ್ಡೆಕರ, ಮಕ್ಸೂದಅಹ್ಮದ ಮುಲ್ಲಾ, ಕಾರ್ಯಾಲಯದ ಸಿಬ್ಬಂದಿ ಸನಾಉಲ್ಲಾ ಮೊಮೀನ. ದಾದಾಪೀರ ಮುಜಾವರ, ನಿಸಾರ ಶೇಖ ಸೇರಿದಂತೆ ಹಲವರು ಉಪಸ್ಥಿತರಿದ್ದರು