ಅಂಜಲಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಕಾಳಗಿ :ಮೇ.26: ಅಂಜಲಿ ಅಂಬಿಗೇರ ಅವರ ಬರ್ಬರ ಹತ್ಯೆ ಖಂಡಿಸಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ತಾಲೂಕಾ ಕೋಲಿ ಸಮಾಜದ ಹಾಗೂ ಹಿಂದೂ ಜಾಗೃತಿ ಸೇನೆ ತಾಲೂಕಾ ಘಟಕ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ಕಾಳಗಿ ಪಟ್ಟಣದಲ್ಲಿ ಬೃಹತ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಮುಖರು, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಕೊಲೆಯ ಬೆನ್ನಲ್ಲೇ ಅಂಜಲಿ ಅಂಬಿಗೇರ ಅವರ ಬರ್ಬರ ಹತ್ಯೆ ಆಗಿದ್ದನ್ನು ಹಿಂದೂ ಜಾಗೃತಿ ಸೇನೆ ತೀವ್ರವಾಗಿ ಖಂಡಿಸುತ್ತದೆ, ರಾಜ್ಯದಲ್ಲಿ ಮಹಿಳೆಯರಿಗೆ ಸರಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ, ಅಲ್ಲದೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಹಲ್ಲೆಗೊಳಗಾಗಿ ಸಾವನ್ನಪಿದ ಅಂಜಲಿ ಅಂಬಿಗೇರ ಅವರ ಕುಟುಂಬಕ್ಕೆ ಸರಕಾರ 1ಕೋಟಿ ರೂ. ಸಹಾಯಧನ ನೀಡಬೇಕು, ಅವರ ಕುಟುಂಬ ವಾಸಿಸಲು ಸರಕಾರ ಮನೆಯನ್ನು ನಿರ್ಮಿಸಿಕೊಡಬೇಕು, ಹಾಗೂ ಅಂಜಲಿ ಅವರ ಸಹೋದರಿಗೆ ಸರಕಾರಿ ನೌಕರಿ ನೀಡಬೇಕು, ಎಂದು ಸರಕಾರಕ್ಕೆ ಆಗ್ರಹಿಸಿದರು. ನಂತರ ಗ್ರೇಡ್-1 ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಶಂಕರ ಚೋಕಾ, ಕೊಲಿ ಸಮಾಜ ಯುವಮೋರ್ಚಾ ತಾಲೂಕಾಧ್ಯಕ್ಷ ಶಿವಕುಮಾರ ಕಮಕನೊರ, ಬಿಜೆಪಿ ಮಂಡಲ ಅಧ್ಯಕ್ಷ ವಿಜಂiÀಕುಮಾರ ಚೇಂಗಟಿ, ಉಪಾಧ್ಯಕ್ಷ ರಾಜಶೇಖರ ಗುಡದಾ, ಕೊಲಿ ಸಮಾಜದ ಮುಖಂಡರಾದ ರಾಜಕುಮಾರ ರಾಜಾಪೂರ, ಜಗನ್ನಾಥ ಚಂದನಕೇರಿ, ರೇವಣಸಿದ್ದಪ್ಪ ಚೆಂಗಟಿ, ಸಿದ್ದು ಕೇಶ್ವರ, ಭೀಮರಾಯ ಮಲಗಾಣ, ಶಿವಕುಮಾರ ಮುಕರಂಬಿ, ಮಲ್ಲಿಕಾರ್ಜುನ ಚಿಕ್ಕಗಸಿ, ಸುನೀಲ ರಾಜಾಪೂರ, ಬಲರಾಮ ವಲ್ಯಾಪೂರೆ, ಕಾಶಿನಾಥ ತೆಲಗಾಣಿ, ಕಿರಣ ನಾಮದಾರ್, ಬಸವರಾಜ ತಳವಾರ, ರಾಹುಲ್ ಚಿತ್ತಾಪೂರ, ರಾಜಕುಮಾರ ತಳವಾರ ಇತರರು ಇದ್ದರು.