ಅಂಜಲಿ ಹತ್ಯೆ, ಅರ್ಜುನ ಚಿತ್ರಹಿಂಸೆ ಖಂಡಿಸಿ ಪ್ರತಿಭಟನೆ

ಕಲಬುರಗಿ,ಮೇ 22: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಮತ್ತು ಕಲಬುರಗಿಯ ಅರ್ಜುನ ಹಣಮಂತ ಚಿತ್ರಹಿಂಸೆ ಖಂಡಿಸಿ ಇಂದು ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯಿಂದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರಗೆ
ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಸಂತ್ರಸ್ತರಿಗೆ ಸೂಕ್ತ ಪರಿಹಾರ, ಭದ್ರತೆ ನೀಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಮೃತ ಅಂಜಲಿ ಕುಟುಂಬದವರಿಗೆ ಮತ್ತು ಚಿತ್ರಹಿಂಸೆಯಿಂದ ನೊಂದ ಅರ್ಜುನ ಹಣಮಂತರಿಗೆ ಸರಕಾರಿ ನೌಕರಿ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅವ್ವಣ್ಣ ಮ್ಯಾಕೇರಿ,ಶಿವಕುಮಾರ ನಾಟೀಕಾರ,ಬಸವರಾಜ ಸಪ್ಪಣ್ಣಗೋಳ,ಸುನೀತಾ ತಳವಾರ,ಅರ್ಜುನ ಹಣಮಂತ ಮಡಿವಾಳ,ಸೂರ್ಯಕಾಂತ ಅವರಾದ,ವಿದ್ಯಾಧರ ಮಂಗಳೂರ,ದಿಲೀಪ ಪಾಟೀಲ,ರೇವಣಸಿದ್ದಪ್ಪ ಸಂಕಾಲಿ,ಗುರುನಾಥ ಪೂಜಾರಿ,ಕಲ್ಯಾಣರಾವ ಪಾಟೀಲ,ಚಂದ್ರಕಾಂತ ಶಾಖಾಪುರ, ಪ್ರೇಮಾ ಕೋಲಿ,ಅರುಣಕುಮಾರ ಪಾಟೀಲ,ಸುರೇಶ ಹುಡಗಿ,ರುಕ್ಮಣ್ಣ ಮಡಿವಾಳ ಸೇರಿದಂತೆ ಹಲವಾರು ಸಮಾಜದ ಮುಖಂಡರು ಪಾಲ್ಗೊಂಡರು.