ಅಂಜನೇಯ ಸ್ವಾಮಿಗೆ ಗಂಧದ ಅಲಂಕಾರ

ಕನಕಪುರ.ಜ೧೨-ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮುತ್ತತ್ತಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಧನುರ್ಮಾಸದ ಅಂಗವಾಗಿ ಸ್ವಾಮಿಗೆ ಭಕ್ತಾದಿಗಳಿಂದ ಶ್ರೀಗಂಧದ ಅಲಂಕಾರ ಮಾಡಲಾಗಿತ್ತು.
ಶ್ರೀಮುತ್ತತ್ತಿಯ ಸ್ವಾಮಿಗೆ ಬೆಂಗಳೂರಿನ ಶ್ರೀಮತಿಪುಟ್ಟಲಿಂಗಮ್ಮ ತಿಮ್ಮಯ್ಯ, ಶ್ರೀಮತಿ ಮಹದೇವಮ್ಮ, ವೆಂಕಟೇಶ್ ಪುತ್ರಿ ಅಂಜನಾ, ಕನಕಪುರ ತಾಲೂಕಿನ ಕೃಷ್ಣಯ್ಯನದೊಡ್ಡಿಯ ಗ್ರಾಮದ ಶ್ರೀಮತಿ ಜಯರತ್ನ ಚಿಕ್ಕಸ್ವಾಮಿ,ಜಗದೀಶ್ ದಂಪತಿಗಳು ಮತ್ತು ಕುಟುಂಬದವರು ಗಂಧದ ಅಲಂಕಾರದ ಸೇವಾಕರ್ತರಾಗಿದ್ದರು.
ದೇವಾಲಯದ ಮುಖ್ಯ ಅರ್ಚಕರಾದ ಹನುಮಂತರಾಜು ಮತ್ತು ಸಂಗಡಿಗರು ಬೆಳಿಗಿನ ಜಾವ ೩.೩೦ಕ್ಕೆ ಪಂಚಾಮೃತಾಭಿಷೇಕವನ್ನು ಶ್ರೀಆಂಜನೇಯಸ್ವಾಮಿಗೆ ಮಾಡುವ ಮೂಲಕ ಪ್ರಾತಃಕಾಲಕಾದ ಪೂಜೆಯನ್ನು ನೆರವೇರಿಸಿದ ನಂತರ ೮ಗಂಟೆಗೆ ಗಂಧಾಲಂಕಾರವು ಮಾಡಿ ಮಹಾಮಂಗಳಾರತಿಯನಂತರ ತೀರ್ಥಪ್ರಸಾಧ ವಿನಿಯೋಗವನ್ನು ಮಾಡಿದರು.
ದೇವಾಲಯದಲ್ಲಿನ ಕರಿಯಣ್ಣ ಕೆಂಚಣ್ಣ ದೇವತೆಗಳನ್ನು ಒಳಗೊಂಡತೆ ಎಲ್ಲಾ ದೇವತೆಗಳಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಕ್ಷೇತ್ರಕ್ಕೆ ಸಾವಿರಾರು ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಒಳಗಾಗಿ ಆಶೀರ್ವಾದ ಪಡೆದರು.