ಅಂಜನೇಯ್ಯ ದಳವಾಯಿ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರಧಾನ

ಅರಕೇರಾ,ಜ.೧೯- ಶ್ರೀದುರ್ಗಾ ಫೌಂಡೇಶನ್ ಹಾಗೂ ಶ್ರೀಆದ್ಯ ಪೌಂಡೇಶನವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಮಾಘ ಮಾಸದ ಕಲಾ ಉತ್ಸವದಲ್ಲಿ ವಿವಿಧ ಜಿಲ್ಲೆಯಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ೨೦೨೩ ನೀಡಲಾಯಿತು.
ಬಿ.ಗಣೇಕಲ್ ಗ್ರಾಮ ಪಂಚಾಯತ ಸದಸ್ಯರಾದ ಆಂಜನೇಯ್ಯ ದಳವಾಯಿ ಇವರಿಗೆ ಸಮಾಜ ಸೇವಕ ರಾಜ್ಯಮಟ್ಟದ ಕರ್ನಾಟಕ ಸೇವಾರತ್ನ ಪ್ರಶಸ್ತಿಯನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ.ಸಂತೋಷ್ ಹೆಗ್ಡೆ ಪ್ರಶಸ್ತಿನೀಡಿ ಗೌರವಿಸಲಾಯಿತು. ಈ ಸಂದಂರ್ಭದಲ್ಲಿ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ, ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶಂಕರ್ ಎಸ್‌ಎನ್, ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್, ಚಲನಚಿತ್ರ ನಟಿ ಪದ್ಮಾ ವಾಸಂತಿ, ದೇವದುರ್ಗ ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಇತರರಿದ್ದರು.