ಅಂಜನಾದ್ರಿ ಹುಂಡಿ ಎಣಿಕೆ 10.65 ಲಕ್ಷ ಸಂಗ್ರಹ


ಸಂಜೆವಾಣಿ ವಾರ್ತೆ
ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ ತಿಂಗಳ ಹುಂಡಿ ಹಣ ಎಣಿಕೆ ಮಾಡಿದ್ದು, ಎರಡು ವಿದೇಶಿ ನಾಣ್ಯ ಸೇರಿ ಒಟ್ಟು 10.64.935 ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ತಹಶಿಲ್ದಾರ್ ಮಂಜುನಾಥ, ಶಿರಸ್ತೇದಾರಾದ ಆನಂತ ಜೋಶಿ, ಮಂಜುನಾಥ ನಂದನ್, ಮೈಬೂಬಅಲಿ, ಕೃಷ್ಣವೇಣಿ ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ ಹಾಗೂ ಮಹೇಶ್ ದಲಾಲ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ  ಗುರುರಾಜ, ಶ್ರೀಕಂಠ,  ಅನ್ನಪೂರ್ಣ, ಮಂಜುನಾಥ ಹಿರೇಮಠ ನಾಗರತ್ನ, ಪ್ರದಸ ಶಿವಕುಮಾರ,  ಗಾಯತ್ರಿ,ಸೌಭಾಗ್ಯ, ಸೈಯದ್, ಶ್ರೀರಾಮ, ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ,ಅಭಿಷೇಕ, ಪೂಜಾ, ಮಂಜುನಾಥ ದುಮ್ಮಾಡಿ,  ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ  ಬ್ಯಾಂಕ್ ಸಿಬ್ಬಂದಿಗಳಾದ ರಾಜಶೇಖರ ಸುನಿಲ್ , ಪೋಲಿಸ್ ಸಿಬ್ಬಂದಿಗಳು  ಪ್ರವಾಸಿ ಮಿತ್ರ ಸಿಬ್ಬಂದಿಗಳು  ಹಾಗೂ ವೆಂಕಟೇಶ  ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು