ಅಂಜನಾದ್ರಿ ಬೆಟ್ಟ ಹುಂಡಿ ಎಣಿಕೆ:ರೂ.25.27 ಲಕ್ಷ ಸಂಗ್ರಹ


ಸಂಜೆವಾಣಿ ವಾರ್ತೆ
ಗಂಗಾವತಿ, ಆ.09: ತಾಲೂಕಿನ ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಪರ್ವತದ ಶ್ರಿ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿದ್ದು ಒಟ್ಟು .25,27,155/- ರೂ ಗಳು ಸಂಗ್ರಹವಾಗಿದೆ.
ಗ್ರೇಡ್-2 ತಹಸೀಲ್ದಾರ ವಿ.ಹೆಚ್ ಹೊರಪೇಟೆ ನೇತೃತ್ವದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ ಕಳೆದ ಜುಲೈ 4 ರಿಂದ ಆ.8 ರವರೆಗಿನ 35 ದಿನದಲ್ಲಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಶಿರಸ್ತೇದಾರಾದ  ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ   ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ಹಾಲೇಶ್ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ   ಶ್ರೀಕಂಠ, ಇಂದಿರಾ, ಅನ್ನಪೂರ್ಣ,  ಪ್ರದಸ  ,  ಗಾಯತ್ರಿ,ಸೌಭಾಗ್ಯ, ಸೈಯದ್ ಮುರ್ತುಜಾ,ಕವಿತಾ ಎಸ್,ಕವಿತಾ ದ್ವಿ.ದ.ಸ ಮತ್ತು  ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು ,  ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ  ಬ್ಯಾಂಕ್ ಸಿಬ್ಬಂದಿಗಳಾದ ಕೃಷ್ಣ, ಸುನಿಲ್ , ಪೋಲಿಸ್ ಸಿಬ್ಬಂದಿ ಮಹಾಂತೇಶ್ , ಪ್ರವಾಸಿ ಮಿತ್ರ ಬೇನಾಳಪ್ಪ ಶಿವಪುರ ಸಿಬ್ಬಂದಿಗಳು  ಹಾಗೂ ವೆಂಕಟೇಶ  ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು   ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ತ್ ಹಾಗೂ ಸಿಸಿ ಟಿವಿ  ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು