ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಕಾಣಿಕೆ ಎಣಿಕೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.26: ತಾಲೂಕಿನ ಆನೇಗೊಂದಿ ಹತ್ತಿರವಿರುವ ಹನುಮನ ಹಳ್ಳಿಯ ಆಂಜನಾದ್ರಿ ಬೆಟ್ಟದ  ಶ್ರೀ ಆಂಜನೇಯಸ್ವಾಮಿ  ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಮಾಡಲಾಯಿತು. ತಹಶೀಲ್ದಾರ ಮಂಜುನಾಥ ನೇತೃತ್ವದಲ್ಲಿ  ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು 55 ದಿನಗಳ ಅವಧಿಯಲ್ಲಿ  ಒಟ್ಟು 28,79,910  ರೂ. ಗಳು ಸೇರಿದಂತೆ ವಿವಿಧ ದೇಶಗಳ 4 ವಿದೇಶಿ ನಾಣ್ಯಗಳು  ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಉಪತಹಶಿಲ್ದಾರ್ ವಿ.ಹೆಚ್ ಹೊರಪೇಟಿ, ಶಿರಸ್ತೇದಾರಾದ ಆನಂತ ಜೋಶಿ, ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ , ಮಹೇಶ್ ದಲಾಲ, ಶರಣಪ್ಪ ಬಿ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ  ಗುರುರಾಜ, ಶ್ರೀಕಂಠ,  ಅನ್ನಪೂರ್ಣ, ನಾಗರತ್ನ, ನಾಗರತ್ನಮ್ಮ ಪ್ರದಸ ಶಿವಕುಮಾರ,  ಗಾಯತ್ರಿ, ಸೈಯದ್, ಶ್ರೀರಾಮ, ಮತ್ತು  ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು ,  ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ  ಬ್ಯಾಂಕ್ ಸಿಬ್ಬಂದಿಗಳಾದ ರಾಜಶೇಖರ ಸುನಿಲ್ , ಪೋಲಿಸ್ ಸಿಬ್ಬಂದಿಗಳು  ಪ್ರವಾಸಿ ಮಿತ್ರ ಸಿಬ್ಬಂದಿಗಳು  ಹಾಗೂ ವೆಂಕಟೇಶ  ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು  

One attachment • Scanned by Gmail