ಅಂಜನಾದ್ರಿ ಪರ್ವತಕ್ಕೆ ಮಾಲಾಧಾರಿಗಳು

ಗಂಗಾವತಿ ಡಿ.28: ಕೋವಿಡ್-19 ನಿಯಂತ್ರಣ ಹಾಗೂ ಗ್ರಾ.ಪಂ. ಚುನಾವಣೆ ಹಿನ್ನೆಲೆ ಅಂಜನಾದ್ರಿ ಪರ್ವತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಮಾಲಾಧಾರಿಗಳು ಆಗಮಿಸದಂತೆ ಜಿಲ್ಲಾಡಳಿತ ನಿಷೇಧ ಹೇರಲಾಗಿತ್ತು. ಆದರೂ ಸಹ ನಾನಾ ಭಾಗದ ಮಾಲಾಧಾರಿಗಳು ಆಗಮಿಸಿ ದರ್ಶನ ಪಡೆದರು.
ದೇಗುಲದಲ್ಲಿ ಬೆಳಗ್ಗೆಯಿಂದಲೇ ಅಭಿಷೆಕ, ಪವಮಾನ ಹೋಮಗಳು ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ವಾಯುಪುತ್ರನಿಗೆ ಭಕ್ತಿ ಸಮರ್ಪಿಸಲಾಯಿತು.
ಸುಮಾರು ಐದು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಆಗಮಿಸಿ ದರ್ಶನ ಪಡೆದರು.
ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು.
ಜಿಲ್ಲಾಧಿಕಾರಿಗಳ ಆದೇಶ ಅನ್ವಯ ಬೆಳಗ್ಗೆ 8 ರಿಂದ 3 ಗಂಟೆ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು 5 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ವಾಯುಪುತ್ರನ ದರ್ಶನ ಪಡೆದಿದ್ದಾರೆ ಎಂದು ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಸಂಜೆವಾಣಿಗೆ ತಿಳಿಸಿದರು.
ಅಂಜನಾದ್ರಿ ಬೆಟಕ್ಕೆ ಆಗಮಿಸಿದ್ದ ಮಾಲಾಧಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಶುಭ ಹಾರೈಸಿದರು.