ಅಂಜನಾದ್ರಿ ದರ್ಶನ ಬಂದ್

ಗಂಗಾವತಿ:ಏ.22- ರಾಜ್ಯ ಸರ್ಕಾರ ಆದೇಶದಂತೆ ಮತ್ತು ಕರೋನ ಎರಡನೇ ಅಲೆ ರಾಜ್ಯಾದ್ಯಂತ ಹೆಚ್ಚಾಗುತ್ತದೆ, ಈ ಹಿನ್ನೆಲೆ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಅಂಜನಾದ್ರಿ ದೇವಸ್ಥಾನದಲ್ಲಿ ಎಪ್ರಿಲ್ 21ರಿಂದ ಭಕ್ತರಿಗೆ ದರ್ಶನ ನಿಷೇಧಿಸಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಕಾರ್ಯದರ್ಶಿ ಆದ ತಹಸೀಲ್ದಾರ್ ನಾಗರಾಜ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.