ಅಂಜನಾದ್ರಿ ದರ್ಶನ ಪಡೆದ ವಜುಭಾಯಿವಾಲಾ

ಗಂಗಾವತಿ ಜ.10: ತಾಲೂಕಿನ ಐತಿಹಾಸಿಕ ಪ್ರಸಿದ್ಧ, ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಪರ್ವತಕ್ಕೆ ಭಾನುವಾರ ರಾಜ್ಯಪಾಲ ವಜುಭಾಯಿವಾಲಾ ಅವರು ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದರು.
ಶೀಲಾಪೂಜೆ ಕಾರ್ಯಕ್ರಮ ಶ್ರೀ ಮಹಾಂತ ವಿದ್ಯಾದಾಸ ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ, ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಎಸ್ಪಿ ಟಿ.ಶ್ರೀಧರ್ ಸೇರಿ ಮತ್ತಿತರರು ಇದ್ದರು.

ಪೊಲೀಸ್ ಬೀಗಿ ಭದ್ರತೆ
ದೇವರ ದರ್ಶನಕ್ಕೆ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು.ಆನೆಗೊಂದಿಯಿಂದ ಅಂಜನಾದ್ರಿ ಬೆಟ್ಟದ ವರೆಗೆ ಬೀಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಅಲ್ಲದೆ, ದೇವಸ್ಥಾನ ಕೆಳಗಡೆ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್‌ ಹಾಕಲಾಗಿತ್ತು .
ಭದ್ರತೆಗಾಗಿ ಒಬ್ಬರು ಸಿಪಿಐ, ಮೂವರು ಪಿಎಸ್‌ಐ, 13 ಎಎಸ್‌ಐ, 28 ಹೆಡ್‌ ಕಾನ್ಸಸ್ಟೇಬಲ್‌, 52 ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.