ಅಂಚೆ ಸಾಧಕರಿಗೆ ಗೌರವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.27: ವಿಭಾಗಮಟ್ಟದಲ್ಲಿ ಅಪಘಾತ ಜೀವ ವಿಮೆಯಲ್ಲಿ ಅತ್ಯಧಿಕ ಪಾಲಿಸಿ ಗಳನ್ನು ನೊಂದಹಿಸಿದ ಬಳ್ಳಾರಿ ವಿಭಾಗದ ಅಂಚೆ ಇಲಾಖೆಯ ಸಾಧಕರಿಗೆ ನಗರದಲ್ಲು ನಡೆದ ಸರಳ ಸಮಾರಂಭದಲ್ಲಿ ಇಂದು  ಉತ್ತರ ಕರ್ನಾಟಕ ವಲಯದ ಪೋಸ್ಟಮಾಸ್ಟರ್ ಜನರಲ್ ಕರ್ನಲ್. ಸುಶೀಲ್ ಕುಮಾರ್ ಅವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಪಿಪಿಎಫ್  ಖಾತೆಯ ವಿಶೇಷ ಅಭಿಯಾನದ ಕುರಿತು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗದ ಅಂಚೆ ಅಧಿಕ್ಷಕರ ವಿ.ಎಲ್. ಚಿತಕೋಟೆ  ಮತ್ತು ಐಪಿಪಿಬಿಯ  ಮ್ಯಾನೇಜರ್ ಡಾಲಿ ಮೊದಲಾದವರು ಇದ್ದರು.
ಬಳ್ಳಾರಿಯ ಹೆಡ್ ಪೋಸ್ಟ್ ಆಫೀಸ್ ನ ಪೋಸ್ಟ್ ಮ್ಯಾನ್ ಎಸ್.ಎಂ.ಶಾಂತಮ್ಮ (1072) ವಿಮೆ ಮಾಡಿಸಿ 422,291 ರೂ ಪ್ರೀಮಿಯಂ ಸಂಗ್ರಹಿಸಿದ್ದರೆ, ಸಿರುಗುಪ್ಪ ತಾಲೂಕಿನ ಹಾವಿನಾಳಿನ ಬಿ.ಪಿ.ಎಂ ವೆಂಕಟೇಶ್ 357 ಖಾತೆ ಮಾಡಿಸಿ 1,41,398 ರೂ ಪ್ರೀಮಿಯಂ, ಹೊಸಪೇಟೆಯ ಪೋಸ್ಟ್ ಮ್ಯಾನ್ ವಸಂತ ಕುಮಾರ್ 297 ಖಾತೆ ತೆರೆದು 1,11,003 ರೂ, ಸಿರುಗುಪ್ಪದ ಕುಡದರ ಹಾಳಿನ ಅಂಚೆ ಸಿಬ್ಬಂದಿ ಬೀರಪ್ಪ 288 ಖಾತೆ ತೆರೆದು 1,14,40 ರೂ ಕೂಡ್ಲಿಗಿಯ ಹರಾಳು ಗ್ರಾಮದ ಪೃಥ್ವಿರಾಜ್ 287 ಖಾತೆ ತೆರೆದು 1,17,381 ರೂ, ಸಿರುಗುಪ್ಪ ತಾಲೂಕಿನ ಕರೂರಿನ ಪ್ರಕಾಶ್ ಶೆಟ್ಟಿ 273 ಖಾತೆ ತೆರೆದು 1.08.672 ರೂ, ಬಳ್ಳಾರಿ ಕೌಲ್ ಬಜಾರ್ ಅಂಚೆ ಕಛೇರಿಯ ವಿ.ಮೋಹನ್ 248 ಖಾತೆ ತೆರೆದು 98,507 ರೂ ಪ್ರೀಯಂ ಸಂಗ್ರಹಿಸಿದ್ದಾರೆ.