ಅಂಚೆ, ಜೆಸ್ಕಾಂ, ಸಾರಿಗೆ ವರ್ಕರ್ಸಗಳಿಗೆ ಕೋವಿಡ್ ಲಸೀಕಾಕರಣ

ಬೀದರ:ಮೇ.26: ಫ್ರಂಟ್‍ಲೈನ್ ವರ್ಕರ್ಸಗಳು ಎಂದು ಗುರುತಿಸಿದ ಅಂಚೆ ಇಲಾಖೆ, ಸರ್ಕಾರಿ ಸಾರಿಗೆ ನೌಕರರು ಹಾಗೂ ಜೆಸ್ಕಾಂ ಮತ್ತು ಇನ್ನೀತರ ಕೆಲವು ಇಲಾಖೆಗಳಲ್ಲಿನ 18-44 ವಯೋಮಾನದವರಿಗೆ ತಾಲೂಕುವಾರು ಕೋವಿಡ್ ಲಸೀಕಾರಣಕ್ಕೆ ಅಚ್ಚುಕಟ್ಟಾಗಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಜೆ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಫ್ರಂಟ್ಲೈನ್ ವರ್ಕರ್ಸಗಳು ಮತ್ತು ದುರ್ಬಲ ಗುಂಪಿನ ಫಲಾನುಭವಿಗಳಿಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಲಾ ಮೂರು ಇಲ್ಲವೇ ನಾಲ್ಕು ಸೆಂಟರಗಳನ್ನು ಮಾಡಿಕೊಂಡು, ಫಲಾನುಭವಿಗಳನ್ನು ಸ್ಥಳಕೆ ಕರೆದು ಲಸೀಕಾರಣ ನಡೆಸಬೇಕು ಎಂದು ತಿಳಿಸಿದರು.
ಇದು ನಿಗದಿಪಡಿಸಿದ ಸೀಮಿತ ಅವಧಿಯಲ್ಲಿ ಮಾತ್ರ ನಡೆಯುವ ಲಸೀಕಾರಣ ಅಭಿಯಾನವಾಗಿದೆ ಎಂಬುದನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿ, ಅವರಿಗೆ ತಪ್ಪದೇ ಲಸಿಕೆ ಕೊಡಿಸಲು ಕ್ರಮ ವಹಿಸಬೇಕು ಎಂದು ಎಲ್ಲ ತಾಲೂಕುಗಳ ತಹಸೀಲ್ದಾರರು ಮತ್ತು ಆಯಾ ತಾಲೂಕುಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ದುರ್ಬಲ ವರ್ಗದ ಫಲಾನುಭವಿಗಳು ಮತ್ತು ಪ್ರಂಟ್ ಲೈನ್ ವರ್ಕರ್ಸಗಳಿಗೆ ಇಲಾಖಾವಾರು, ತಾಲೂಕುವಾರು ಇಂತಿಷ್ಟು ಕೋವಿಡ್ ಲಸಿಕೆ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ಆಯಾ ಇಲಾಖೆಗಳಿಗೆ ಗುರಿ ನಿಗದಿಪಡಿಸಿದರು.
ಅಂಚೆ ಇಲಾಖೆ, ಜೆಸ್ಕಾಂ, ಸಾರಿಗೆ ಇಲಾಖೆ ಸೇರಿದಂತೆ ಇನ್ನೀತರ ಪ್ರಮುಖ ಫ್ರಂಟ್‍ಲೈನ್ ವರ್ಕರ್ಸಗಳಿಗೆ ತಾಲೂಕುವಾರು ಕೋವಿಡ್ ನೀಡಿಕೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಗುರಿಯನುಸಾರ ಮತ್ತು ತಾಲೂಕುವಾರು ಈಗಾಗಲೇ ತಯಾರಿಸುವ ಪಟ್ಟಿಗೆ ಆಯಾ ತಾಲೂಕುಗಳ ತಹಸೀಲ್ದಾರರೇ ಅನುಮತಿ ಕೊಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ನಿಗದಿಪಡಿಸಿದ ಗುರಿಯನುಸಾರ ಮತ್ತು ತಾಲೂಕುವಾರು ಈಗಾಗಲೇ ತಯಾರಿಸುವ ಪಟ್ಟಿಯನುಸಾರ ಆಯಾ ಇಲಾಖೆಗಳು ಆಯಾ ತಾಲೂಕುಗಳಲ್ಲಿ ನಡೆಸುವ ಕೋವಿಡ್ ಲಸಿಕೆಯ ನೀಡಿಕೆಯ ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕು.
ಆಯಾ ಗುಂಪುಗಳಿಗೆ ಮತ್ತು ಆಯಾ ಇಲಾಖೆಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಕೋವಿಡ್ ಲಸೀಕಾಕರಣದ ಮೇಲುಸ್ತುವಾರಿಯನ್ನು ಸರಿಯಾಗಿ ನಿಬಾಯಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಜಹೀರಾ ನಸೀಮ್, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ, ಆರ್‍ಸಿಎಚ್ ಅಧಿಕಾರಿ ಡಾ.ರಾಜಶೇಕರ, ಆಯಾ ತಾಲೂಕುಗಳ ತಹಸೀಲ್ದಾರರು ಮತ್ತು ನೋಡಲ್ ಅಧಿಕಾರಿಗಳು ಮತ್ತು ಇನ್ನೀತರರು ಇದ್ದರು.