ಅಂಚೆ ಕಚೇರಿ ಉದ್ಘಾಟನೆ

ಮುದ್ದೇಬಿಹಾಳ:ಅ.27: ಗ್ರಾಮಸ್ಥರೆಲ್ಲ ಸೇರಿ ಅಂಚೆ ಕಚೇರಿಗೆ ಸ್ಥಳಾವಕಾಶ, ಹಣ, ಕಟ್ಟಡದ ಸಾಮಗ್ರಿ ಸೇರಿದಂತೆ ಎಲ್ಲ ರೂಪದ ಸಹಕಾರ ನೀಡಿ ಶಾಶ್ವತ ಕಟ್ಟಡ ಕಟ್ಟಿಕೊಟ್ಟ ಉದಾಹರಣೆ ಗ್ರಾಮಸ್ಥರ ವಿಶಾಲ ಮನೋಭಾವಕ್ಕೆ ಕಾರಣವಾಗಿದೆ ಎಂದು ಉಪವಿಭಾಗದ ಅಂಚೆ ನಿರೀಕ್ಷಕ ಕೃಷ್ಣಾ ಸಂಕರಟ್ಟಿ ಹೇಳಿದರು.

ಅವರು ಭಾನುವಾರ ತಾಲ್ಲೂಕಿನ ಗುಂಡಖರ್ಜಗಿ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ಕಟ್ಟಿದ ಅಂಚೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿಯ ಅವಶ್ಯಕತೆ ಮೊದಲಿಂದಲೂ ಬಹಳಷ್ಟಿದೆ. ಸಾಂಪ್ರದಾಯಿಕ ಸೇವೆ ಪತ್ರ ವಿತರಣೆಯ ಜೊತೆಗೆ ಈಗ ಸರ್ಕಾರದ ಮಾನವೀಯ ಸೇವೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಸೇರಿದಂತೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯ ವೇತನಗಳನ್ನು ಅರ್ಹ ಫಲಾನುಭವಿಗಳಿಗೆ ಮನೆ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸವನ್ನು ಇಲಾಖೆ ಮಾಡಿಕೊಂಡು ಬಂದಿದೆ. ಜನತೆ ಅಂಚೆ ಇಲಾಖೆ ಮೇಲೆ ವಿಶ್ವಾಸ ಇಟ್ಟು ತಮ್ಮ ಉಳಿತಾಯದ ಹಣವನ್ನು ಇಲಾಖೆಯ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಬೇಕು ಎಂದು ಕರೆ ನೀಡಿದರು. ಅತಿಥಿಯಾಗಿದ್ದ ಮುದ್ದೇಬಿಹಾಳ ಮುಖ್ಯ ಅಂಚೆ ಕಚೇರಿಯ ಟ್ರೆಜರರ್ ಎಂ.ಎಸ್.ಗಡೇದ ಮಾತನಾಡಿ, ಕರೋನಾ ಸಂಕಷ್ಟದ ಸಮಯದಲ್ಲಿ ಅಂಚೆ ಇಲಾಖೆ ಎಲ್ಲ ಬಡವರ ಮನೆಬಾಗಿಲಿಗೆ ತೆರಳಿ ತನ್ನ ಮಾನವೀಯ ಸೇವೆ ನೀಡಿದೆ. ಕೊರೋನಾ ನಿಯಂತ್ರಿಸಲು ಬೇಕಾದ ಅಗತ್ಯ ವಸ್ತುಗಳನ್ನು ಸರ್ಕಾರ ಹಾಗೂ ಜನತೆಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದೆ. ಅಂಚೆ ಇಲಾಖೆ ಕಾಲಮಾನಕ್ಕೆ ತಕ್ಕಂತೆ ತನ್ನ ಸೇವೆಯಲ್ಲಿ ಸಹ ಬದಲಾವಣೆ ಮಾಡಿಕೊಂಡು ಜನತೆಗೆ ಅವಶ್ಯಕ ಸೇವೆ ನೀಡುವಲ್ಲಿ ಬದ್ಧವಾಗಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ನಿತ್ಯದ ದುಡಿಮೆಯಲ್ಲಿ ಉಳಿಸಿ, ಅದರಲ್ಲಿ ಗ್ರಾಮೀಣ ಅಂಚೆ ಜೀವವಿಮೆ, ಉಳಿತಾಯ ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ, ಪಿ.ಪಿ.ಎಫ್ ಖಾತೆ ಸೇರಿದಂತೆ ಅನೇಕ ಸೇವೆಗಳಲ್ಲಿ ತಮ್ಮ ಹಣ ತೊಡಗಿಸಬೇಕು. ಇದು ಆಪತ್ಕಾಲದಲ್ಲಿ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದರು. ಗ್ರಾಮದ ಬಸವೇಶ್ವರ ಮಂಡಳಿ ವತಿಯಿಂದ ಕಟ್ಟಲಾದ ಅಂಚೆ ಕಚೇರಿಯಲ್ಲಿ ಬಸವೇಶ್ವರನ ಭಾವಚಿತ್ರಕ್ಕೆ ಶರಣಯ್ಯ ಹಿರೇಮಠ ಪೂಜೆ ನೆರವೇರಿಸಿದರು. ವೇದಿಕೆಯಲ್ಲಿ ಗಣ್ಯರಾದ ಗೌಡಪ್ಪಗೌಡ ಪಾಟೀಲ, ಶಿವನಗೌಡ ಪಾಟೀಲ, ಸಿ.ಎಸ್.ದಳವಾಯಿ, ಶ್ರೀಶೈಲ ರೇವಡಿಹಾಳ, ಶರಣಪ್ಪ ಉಪ್ಪಲದಿನ್ನಿ, ಶಿವಪ್ಪ ದಳವಾಯಿ, ಲಕ್ಷಣ ಸಂಕನಾಳ, ನೀಲಪ್ಪ ಕೋಡಬಾಗಿ, ಬಾಬುಲಾಲ ಚಪ್ಪರಬಂದ, ಹಣಮಂತರಾಯ ಬ್ಯಾಕೋಡ, ಶಿವಾನಂದ ಸುರಳಿಕಲ್ಲ, ಸಂಗಯ್ಯ ಹಿರೇಮಠ, ಹಂಪಣ್ಣ ರೇವಡಿಹಾಳ, ಪರಸಪ್ಪ ದಳವಾಯಿ, ವಸಂತ ಬಡಿಗೇರ, ಯಲ್ಲಪ್ಪ ಈಳಗೇರ, ಗುರುಪಾದಪ್ಪಗೌಡ ಬಿರಾದಾರ ಮತ್ತಿತರರು ಇದ್ದರು. ಕೀರ್ತಿ ರೇವಡಿಹಾಳ ಬಸವ ವಚನ ಗಾಯನ ಮಾಡಿದರು. ಪೆÇೀಸ್ಟ ಮಾಸ್ಟರ್ ಈರಣ್ಣ ರೇವಡಿಹಾಳ ಸ್ವಾಗತಿಸಿದರು. ಶಿಕ್ಷಕ ನೀಲಪ್ಪ ಕೋಡಬಾಗಿ ನಿರೂಪಿಸಿದರು. ಪರಶುರಾಮ ದಳವಾಯಿ ವಂದಿಸಿದರು.