ಅಂಚೆ ಇಲಾಖೆ ನೂರಾರು ಸೇವೆಗಳಿಗೆ ತೆರೆದ ಬಾಗಿಲು : ವಿ,ಎಲ್. ಚಿತ್ಕೋಟೆ,


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 20 :- ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಜಲಸಾಮಾನ್ಯರಿಗೆ ಮುಟ್ಟಲು ಅಂಚೆ ಇಲಾಖೆ ಸೋಪಾನವಾಗಿದೆ, ಪ್ರಧಾನ ಮಂತ್ರಿಗಳು ಜಾರಿಗೊಳಿಸಿದ ನೂರಾರು ಯೋಜನೆಗಳನ್ನು ಅಂಚೆ ಇಲಾಖೆ ಸಮರ್ಪಕವಾಗಿ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟುವಂತೆ ಮಾಡಲು ಪ್ರತಿ ಹಳ್ಳಿಗಳಿಗೂ ಗ್ರಾಮೀಣ ಅಂಚೆ ಕಚೇರಿಗಳನ್ನು ಇಟ್ಟು ಗ್ರಾಮೀಣ ಅಂಚೆ ಪಾಲಕರ ಮೂಲಕ ಕೇಂದ್ರ ಸರ್ಕಾರದ ಸೌಲಭ್ಯವನ್ನು ಮನೆಮನೆಗೂ ಮುಟ್ಟುವಂತೆ ಮಾಡವಲ್ಲಿ ಯಶಸ್ವಿಯಾಗಿದೆ, ಹಾಗೂ ಪ್ರತಿ ದಿನ ನೂರಾರು ಸೇವೆಗಳನ್ನು ಇಲಾಖೆ ಗ್ರಾಹಕರಿಗೆ ಒದಗಿಸುತ್ತದೆ,  ಅಂಚೆ ಇಲಾಖೆ ಬರೀ ಕಾಗದ ಪತ್ರಗಳ ವಿಲೇವಾರಿಗೆ  ಮೀಸಲಾಗಿರದೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೂಡ ದಾಪುಗಾಲು ಇಟ್ಟಿದೆ ಎಂದು ಬಳ್ಳಾರಿಯುವ ವಿಭಾಗದ ಅಂಚೆ ಅಧೀಕ್ಷಕರಾದ ವಿ. ಎಲ್. ಚಿತ್ಕೋಟೆ ತಿಳಿಸಿದರು.
ಅವರು ಬುಧವಾರ  ಸಂಜೆ ಪಟ್ಟಣದ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ನಡೆದ ಕೂಡ್ಲಿಗಿ ಉಪ ವಿಭಾಗ ಮಟ್ಟದಲ್ಲಿನ ಅಂಚೆ ಇಲಾಖೆಯಲ್ಲಿನ ವ್ಯವಹಾರಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ 160 ವರ್ಷಕ್ಕಿಂತಲೂ ಹಳೆಯದಾದ ಈ ಇಲಾಖೆ ಈಗಲೂ ಗ್ರಾಹಕರಿಗೆ ಪ್ರಸ್ತುತ ಎನ್ನುವಂತೆ ಮಾಡಲು ನಮ್ಮ ಇಲಾಖೆಯ ಪೂರ್ವಿಕ ನೌಕರರ ಶ್ರಮ ಇಂದಿಗೂ ಸಾರ್ಥಕತೆಯನ್ನು ಪಡೆದಿದೆ, ದೇಶದಲ್ಲಿ ಅನೇಕ ಇಲಾಖೆಗಳು ಖಾಸಗಿಕರಣಗೊಂಡರೆ ಅಂಚೆ ಇಲಾಖೆ ಮಾತ್ರ ನೌಕರರ ಶ್ರಮ, ಮತ್ತು ಗ್ರಾಹಕರಿಗೆ ನೀಡುವ ಸೇವೆ, ದೇಶಕ್ಕೆ ಒದಗಿಸುವ ಸೌಲಭ್ಯ ಇವುಗಳಿಂದ ಇನ್ನೂ ಕೂಡ ಗಟ್ಟಿಯಾಗಿ ಉಳಿದುಕೊಂಡಿದೆ, ಇಲಾಖೆ ಅಭಿವೃದ್ಧಿಗೆ ನೌಕರರು ಕೈಜೋಡಿಸಬೇಕು, ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಇಲಾಖೆ ಲಾಭದಲ್ಲಿ ಉಳಿಯಲು ಅಸಾಧ್ಯ, ಅಂಚೆ ಇಲಾಖೆಯು ನಮ್ಮ ಬಳ್ಳಾರಿ ವಿಭಾಗಕ್ಕೆ ಈ ಬಾರಿ 1,56,000 ಖಾತೆಗಳನ್ನು ತೆರೆಯುವ ಗುರಿಯನ್ನು ಕೊಟ್ಟಿದೆ, ಆ ಗುರಿಯನ್ನು ಈಡೇರಿಸುವಲ್ಲಿ ಕೂಡ್ಲಿಗಿ ಉಪ ವಿಭಾಗದ ಎಲ್ಲಾ ಅಂಚೆ ನೌಕರರು ಹಾಗೂ ಗ್ರಾಮೀಣಂಚಿನ  ನೌಕರರು ಶ್ರಮಿಸಿದಾಗ ಮಾತ್ರ  ಬದಲಾವಣೆ ಸಾಧ್ಯ, ಈ ಕೆಲಸದಿಂದ ನಿಮಗೂ ಕೂಡ ಪ್ರಶಸ್ತಿಗಳು ಸಿಗುತ್ತವೆ, ಪ್ರಶಸ್ತಿ ನಿಮಗಲ್ಲ ನಿಮ್ಮ ಕೆಲಸಕ್ಕೆ, ಎಂದು ತಿಳಿಸಿದರು.
ಕೂಡ್ಲಿಗಿ ಉಪವಿಭಾಗದ  ಅಂಚೆ ನಿರೀಕ್ಷಕ ಬಾರಿಕರ ರಾಜಪ್ಪ ಮಾತನಾಡಿ ಉತ್ತರ ಕರ್ನಾಟಕದ ವಲಯ ಮಟ್ಟದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆ ತೆರೆಯುವಲ್ಲಿ ಕೂಡ್ಲಿಗಿ ಪ್ರಥಮ ಸ್ಥಾನ ಹಾಗೂ ಹೊಸಹಳ್ಳಿ ದ್ವಿತೀಯ ಸ್ಥಾನವನ್ನು ಮತ್ತು ಕೂಡ್ಲಿಗಿ ಉಪ ವಿಭಾಗ ಪ್ರಥಮ ಸ್ಥಾನವನ್ನು ಅಲಂಕರಿಸಿದೆ, ಇದಕ್ಕೆ ಕಾರಣಿಭೂತರಾದವರನ್ನೆಲ್ಲಾ  ಸನ್ಮಾನಿಸಲಾಗುತ್ತದೆ,ಇಷ್ಟಿದ್ದರೂ ಕೂಡ ಹಳ್ಳಿಗಳಲ್ಲಿ ನಾವು ಇದುವರೆಗೂ ಹಳ್ಳಿಯ ಎಲ್ಲಾ ಜನರಿಗೆ ನಮ್ಮ ಸೇವೆಗಳನ್ನು ತಲುಪಿಸುವಲ್ಲಿ ವಿಫಲರಾಗಿದ್ದೇವೆ, ಅಂಚೆ ವಿಮೆ ಹಾಗೂ ಗ್ರಾಮೀಣ ಅಂಚೆ ವಿಮೆಯನ್ನು ಹಳ್ಳಿಗಳ ಪ್ರತಿಮನೆಗಳಿಗೂ ಮುಟ್ಟಿಸುವಂತೆ ನಾವು ಕೆಲಸ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೂಡ್ಲಿಗಿ ಅಂಚೆಪಾಲಕ  ಅಂಚೆ ಕೊಟ್ರೇಶ್ ಮಾತನಾಡಿ  ಗ್ರಾಮೀಣ ಅಂಚೆಪಾಲಕರು ಇಡೀ  ಹಳ್ಳಿಗೆ ಚಿರಪಚಿತರಾಗಿದ್ದರೂ ಅಂಚೆ ಪಾಲಕರಿಗೆ ಗ್ರಾಮೀಣದ ಎಲ್ಲಾ ಜನರು ಪರಿಚಯವಾಗಿರಬೇಕು, ಆಗ ಮಾತ್ರ ಅಂಚೆ ಇಲಾಖೆಯ ಎಲ್ಲಾ ಸೇವೆಗಳನ್ನು ಆ ಗ್ರಾಮದ ಎಲ್ಲಾ ವ್ಯಕ್ತಿಗಳಿಗೂ ಕೊಡಲು ಸಾಧ್ಯವಾಗುತ್ತದೆ, ಹಳ್ಳಿಯ ಅಂಚೆ  ಕಚೇರಿಯು ಅಭಿವೃದ್ಧಿ ಹೊಂದುತ್ತದೆ, ಅಂಚೆ ಪಾಲಕರ ಪ್ರಾಮಾಣಿಕ ಸೇವೆಯೇ  ಇಲಾಖೆಯ ಮೇಲ್ಮಟ್ಟಕ್ಕೆ ಒಯ್ಯುತ್ತದೆ ಮತ್ತು ಗ್ರಾಹಕರು ಇಲಾಖೆಯ ಮೇಲೆ ನಂಬಿಕೆಯನ್ನು ಇಟ್ಟುಕೊಳ್ಳುತ್ತಾರೆ, ಈ ನಿಟ್ಟಿನಲ್ಲಿ ಅಂಚೆ ಪಾಲಕರ ” ನಡೆ ನುಡಿ”  ಒಂದೇ ಆಗಿರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಕಲ್ಲಪ್ಪ ಮಾತನಾಡಿ ಅಂಚೆ ಇಲಾಖೆಯು ಈ ದೇಶದ ರಕ್ತನಾಡಿಯ ಹಾಗೆ ಕೆಲಸ ಮಾಡುತ್ತಿದೆ, ನೂರಾರು ಸೇವೆಗಳನ್ನು ಒದಗಿಸಿಕೊಂಡು ಬಂದಿರುವ ಇಲಾಖೆಯ ಹೀಗೆ ಮುಂದುವರೆಯುವಂತೆ ಆಶಿಸಿದರು,
ಅಂಚೆ ವಿಮೆಯ ಅಭಿವೃದ್ಧಿ ಅಧಿಕಾರಿ ಮಾರುತಿ, ಬಳ್ಳಾರಿಯ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕರಾದ ಕೆ ವೆಂಕಟೇಶ್, ಹೊಸಪೇಟೆ ವಿಭಾಗದ ಅಖಿಲ ಭಾರತ ಅಂಚೆ  ನೌಕರರ ಸಂಘಗಳ ಕಾರ್ಯದರ್ಶಿಯಾದ ಸುರೇಶ್ ಕುಮಾರ್ ಎಲ್ ಎಸ್ ಮಾತನಾಡಿದರು,
ಕೆ ವೆಂಕಟೇಶ್  ಸ್ವಾಗತಿಸಿದರು,  ಎಲ್ಎಸ್ ಸುರೇಶ್ ಕುಮಾರ್  ಕಾರ್ಯಕ್ರಮ ನಿರೂಪಿಸಿದರು,ಮೇಲ್ವಿಚಾರಕ ಕೆ ಎಂ ರವಿಕುಮಾರ ವಂದನಾರ್ಪಣೆ ಸಲ್ಲಿಸಿದರು.

One attachment • Scanned by Gmail