ಅಂಚೆ ಇಲಾಖೆಯಿಂದ ಗ್ರಾಹಕರಿಗೆ ಸಮಯ ವಿಸ್ತರಣೆ ಶ್ಲಾಘನೀಯ-ಸಾಲಿಗ್ರಾಮ ಗಣೇಶ್ ಶೆಣೈ

ಸಂಜೆವಾಣಿ ವಾರ್ತೆ

 ದಾವಣಗೆರೆ-ಜು.4; ದಾವಣಗೆರೆಯ ಅಂಚೆ ಇಲಾಖೆಯ ಎಲ್ಲಾ ಕಛೇರಿಗಳ ಪತ್ರಗಳು ಸೇರಿದಂತೆ ಇನ್ನಿತರ ದಾಖಲೆಗಳ ವಿತರಿಸುವ ಪರಿಕರಗಳನ್ನು ವಿಂಗಡಣಾ ಕಛೇರಿ, ರೈಲ್ವೇ ಮೇಲ್ ಸರ್ವಿಸ್ (ಆರ್.ಎಂ.ಎಸ್.) ನಗರದ ರೈಲ್ವೇ ನಿಲ್ದಾಣದಲ್ಲಿ ಇದ್ದು ಈ ಕಛೇರಿಯಿಂದ ಗ್ರಾಹಕರಿಗೆ ಸಮಯ ಈ ಹಿಂದೆ ಸಂಜೆ 6 ರಿಂದ 9.30 ರವರೆಗೆ ಇದ್ದು ಸಾರ್ವಜನಿಕವಾಗಿ ಗ್ರಾಹಕರಿಗೆ ಅನುಕೂಲವಾಗುವ ಸದುದ್ದೇಶದಿಂದ ನಡು ರಾತ್ರಿ 11 ಗಂಟೆಯವರೆಗೆ ವಿಸ್ತರಿಸಿದ್ದು ಶ್ಲಾಘನೀಯ. ಈ ಸಾಮಾಜಿಕ ಕಾಳಜಿಯ ಅಂಚೆಯ ಸೇವೆಗೆ ಸಾರ್ವಜನಿಕರ ಪರವಾಗಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಕಳೆದ ಮೂರುವರೆ ದಶಕಗಳಿಂದ ನಮ್ಮ ಸಂಸ್ಥೆಗಳಿಗೆ ನಿರಂತರವಾಗಿ ಪ್ರಾಮಾಣಿಕವಾಗಿ, ಸಾಮಾಜಿಕ, ಸೇವೆ ಮನೋಭಾವನೆಯಿಂದ ಸಹಕರಿಸುತ್ತಿರುವ ಅಂಚೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶೆಣೈಯವರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಕಲಾಕುಂಚಕ್ಕೆ ನಿರಂತರ ಸೇವೆ ಪಡೆದ ಅಂಚೆ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರ್.ಎಂ.ಎಸ್. ಅಂಚೆ ಕಛೇರಿಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ವೇದಿಕೆಯಲ್ಲಿ ಅಂಚೆ ಕಛೇರಿಯ ಅಧಿಕಾರಿಗಳಾದ ಎಂ.ಉಮೇಶ್, ಮಂಜುನಾಥ್ ಆರ್.ಶೇತ್ಸನದಿ, ಶ್ರೀಮತಿ ಬಿ.ನೀರಜ್, ಟಿ.ಎಂ.ನಾಗೇAದ್ರಪ್ಪ ಇನ್ನಿತರ ಸಿಬ್ಬಂದಿ ವರ್ಗ, ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಕೆ.ಬಿ.ಬಡಾವಣೆ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ಕಲಾಕುಂಚ ಡಿ.ಸಿ.ಎಂ.ಶಾಖೆಯ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ ಹಾಗೂ ಕಲಾಕುಂಚದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.