ಅಂಗಾಲು ಒಡೆದಿರುವುದಕ್ಕೆ ಮನೆಮದ್ದು

೧. ಈರುಳ್ಳಿಯನ್ನು ರುಬ್ಬಿ ನುಣ್ಣಗೆ ಕಲ್ಕ ಮಾಡಿ ಅಂಗಾಲಿಗೆ ಹಚ್ಚಿ ಉಜ್ಜುವುದರಿಂದ ಅಥವಾ ಒಂದು ಬಟ್ಟೆಹಾಕಿ ಕಟ್ಟುವುದರಿಂದ ಅಧಿಕ ಲಾಭ ಉಂಟು.
೨. ಹರಳೆಣ್ಣೆ, ಅರಿಶಿನದ ಪುಡಿಯನ್ನು ಕಲಸಿ ಹಚ್ಚುವುದರಿಂದ ಅಂಗಾಲು ಒಡೆದಿರುವುದು ಕಡಿಮೆ ಆಗುತ್ತದೆ.
೩. ತುಪ್ಪದಲ್ಲಿ ೮ – ೧೦ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಎಲೆಯಲ್ಲಾ ಕರಕಲಾದ ಮೇಲೆ ಅದನ್ನು ಶೋಧಿಸಿಕೊಳ್ಳಿ. ಇದಕ್ಕೆ ಸಮಪ್ರಮಾಣ ಜೇನುಮೇಣವನ್ನು ಕಾದ ಬಾಣಲಿಗೆ ಹಾಕಿ ಕರಗಿಸಿ ಅದಕ್ಕೆ ಶೋಧಿಸಿದ ತುಪ್ಪವನ್ನು ಬೆರೆಸಿ. ಚೆನ್ನಾಗಿ ಕಲಕಿ ಬಿಸಿ ಇರುವಾಗಲೇ ಗಾಜಿನ ಸೀಸೆಗೆ ಹಾಕಿಕೊಳ್ಳಿ. ಆರಿದ ನಂತರ ಒಳ್ಳೆಯ ಮುಲಾಮು ರೆಡಿಯಾಗುತ್ತದೆ. ನಯಾದ ಈ ಮುಲಾಮು ಅಂಗಾಲಿಗೆ ಅಥವಾ ಎಲ್ಲೆಲ್ಲಿ ಚರ್ಮ ಒಡೆದಿದೆಯೋ ಅಲ್ಲೆಲ್ಲಾ ಹಚ್ಚಿಕೊಳ್ಳುತ್ತಾ ಬಂದರೆ ೫ – ೬ ದಿನದಲ್ಲಿ ಕಾಲು ಬಹಳ ನಯವಾಗಿ, ಸುಂದರವಾಗಿ ಆಗುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.