ಅಂಗಾಂಗ ದಾನಕ್ಕೆ ಮುಂದಾದ ಟಾಲಿವುಡ್‌ನಟ ವಿಜಯ್‌ದೇವರಕೊಂಡ

ಹೈದಾರಾಬಾದ್, ನ ೧೭? ಟಾಲಿವುಡ್‌ನಟ ವಿಜಯ್‌ದೇವರಕೊಂಡ ಅವರು ಅಂಗಾಂಗ ದಾನಕ್ಕೆ ಮುಂದಾಗಿದ್ದು, ಆರ್ಗನ್‌ಡೊನೇಟ್‌ಪತ್ರಗಳಿಗೆ ಸಹಿ ಹಾಕಿರುವ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ವಿಜಯ್‌ಅವರ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಟಾಲಿವುಡ್‌ಸ್ಟಾರ್‌ನಟ ವಿಜಯ್‌ದೇವರಕೊಂಡ ಬರೀ ತೆಲುಗು ಪ್ರೇಕ್ಷರಿಗಷ್ಟೇ ಅಲ್ಲ, ಕನ್ನಡಿಗರು ಸೇರಿದಂತೆ ಫ್ಯಾನ್‌ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವಿಜಯ್, ಸತ್ತ ನಂತರವೂ ಬದುಕಲು ನಾನು ಇಷ್ಟ ಪಡುತ್ತೇನೆ. ಅದಕ್ಕಾಗಿ ಅಂಗಾಂಗ ದಾನ ಮಾಡಲಿದ್ದೇನೆ. ಆರ್ಗನ್‌ಡೊನೇಟ್‌ದಾಖಲೆಗಳಿಗೆ ಸಹಿ ಹಾಕುವ ಕೆಲಸ ಈಗಾಗಲೇ ಮುಗಿದಿದೆ ಎಂದು ತಿಳಿಸಿದರು.

ಮನುಷ್ಯ ಸತ್ತ ಮೇಲೆ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಈ ಮಣ್ಣದಲ್ಲಿ ದೇಹ ಮಣ್ಣಾಗುವ ಬದಲು ಉಪಯೋಗವಾಗಲಿ ಎಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.
ತಮಗೆ ಇಂಥದ್ದೊಂದು ಯೋಚನೆ ಬಂದಿದ್ದು ವೈದ್ಯ ವಿದ್ಯಾರ್ಥಿಗಳನ್ನು ನೋಡಿದಾಗ ಮತ್ತು ಅವರೊಂದಿಗೆ ಮಾತನಾಡಿದಾಗ ಎಂದು ವಿಜಯ್ ತಿಳಿಸಿದ್ದಾರೆ
ವಿಜಯ್‌ಸೇರಿದಂತೆ ಹಲವಾರು ನಟರು ಇಂದು ಅಂಗಾಂಗ ದಾನ ಸೇರಿದಂತೆ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವುದು ಎಲ್ಲೋ ಒಂದು ಕಡೆ ಇದಕ್ಕೆಲ್ಲ ಪುನೀತ್‌ರಾಜಕುಮಾರ್‌ಅವರ ಬದುಕು ಸ್ಪೂರ್ತಿಯಾಯಿತು ಎಂದು ಹೇಳಬಹುದು.
ಇನ್ನು ವಿಜಯ್‌ಇತ್ತೀಚೆಗೆ ಸ್ಟಾರ್‌ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ?ಲೈಗರ್? ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ. ವಿಜಯ್ ಚಿತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದರು ಅದ್ರೆ, ಸಿನಿಮಾದ ಕಥೆ ಜನರಿಗೆ ಇಷ್ಟವಾಗಲಿಲ್ಲ ಪ್ರಸ್ತುತ, ವಿಜಯ್ ದೇವರಕೊಂಡ ಸಮಂತಾ ಅವರೊಂದಿಗೆ ಮುಂಬರುವ ಖುಷಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.