ಅಂಗವೈಕಲ್ಯ ಸಾಧನೆಗೆ ಎಂದೂ ಅಡ್ಡಿಯಾಗಲಾರದು

ಧಾರವಾಡ,ನ21: ನಗರದ ಕ್ಲಾಸಿಕ್ ಸಂಸ್ಥೆಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಕೆಲವು ಸಮಾಜ ಮುಖಿ ಕಾರ್ಯಕ್ರಮದ ಭಾಗವಾಗಿ ಕಿವುಡ ಮತ್ತು ಮೂಗ ಮಕ್ಕಳಿಗೆ ಹಾಸಿಗೆ-ಹೊದಿಕೆ ಹಾಗೂ ಹಣ್ಣು ವಿತರಿಸುತ್ತಿಸುವುದು ಶ್ಲಾಘನೀಯವಾಗಿದೆ ಎಂದು ಮನಗುಂಡಿ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.
ಅವರು ಧಾರವಾಡದ ಕ್ಲಾಸಿಕ್ ಕೆಎಎಸ್ ಆ್ಯಂಡ್ ಐಎಎಸ್ ಸ್ಟಡಿ ಸರ್ಕಲ್‍ನ ರಜತ ಮಹೋತ್ಸವ ನಿಮಿತ್ತ ಧಾರವಾಡದ ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಭಾನುವಾರ ಹಮ್ಮಿಕೊಂಡಿದ್ದ ಹಾಸಿಗೆ-ಹೊದಿಕೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಜನ್ಮ ಬಹು ಶ್ರೇಷ್ಠವಾದದ್ದು. ಅಂಗವೈಕಲ್ಯವು ಸಾಧನೆಗೆ ಎಂದೂ ಅಡ್ಡಿಯಾಗಲಾರದು. ಕೇಂದ್ರ ಸರ್ಕಾರವು ಅಂಗವಿಕಲರನ್ನು ದಿವ್ಯಾಂಗರೆಂದು ಕರೆದು ಅವರಿಗೆ ಗೌರವ ನೀಡಿದೆ. ಈ ಸಂದರ್ಭದಲ್ಲಿ ಕ್ಲಾಸಿಕ್ ಸಂಸ್ಥೆಯ ಕಾರ್ಯ ಶಾಘÀನೀಯವೆಂದರು.
ಕಳೆದ 25 ವರ್ಷಗಳಿಂದ ಸ್ಪರ್ಧಾತ್ಮಕ ತರಬೇತಿಯಲ್ಲಿ ತನ್ನದೇ ಆದ ವಿಶಿಷ್ಟತೆ ಮೂಡಿಸಿರುವ ಕ್ಲಾಸಿಕ್ ಸಂಸ್ಥೆಯು ಕೇವಲ ತರಬೇತಿಯಲ್ಲದೇ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಸಂಸ್ಥೆಯ ಯಶಸ್ಸಿಗೆ ಮುಖ್ಯ ಕಾರಣ ನಿರ್ದೇಶಕರಾದ ಲಕ್ಷ್ಮಣ ಎಸ್ ಉಪ್ಪಾರ್ ಅವರು. ಅವರ ಶ್ರಮರಹಿತ ಸೇವೆಯಿಂದ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ಸಾವಿರಾರು ಯುವಜನರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕರಾದ ಲಕ್ಷ್ಮಣ ಎಸ್ ಉಪ್ಪಾರ ಅವರು ಮಾತನಾಡಿ, ಸಂಸ್ಥೆಯು ಈಗ 25 ವರ್ಷಗಳನ್ನು ಪೂರೈಸಿದ್ದು ಜನವರಿ ತಿಂಗಳಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ವೈಭವದಿಂದ ನಡೆಸಲಾಗುತ್ತದೆ. ಈ ನಿಮಿತ್ತ 25 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇಂದು ಕಿವುಡ ಮೂಗ ಮಕ್ಕಳಿಗೆ ಹಾಸಿಗೆ ಹೊದಿಕೆ ನೀಡಲಾಗಿದೆ. ಈ ಸೇವೆ ಇಷ್ಟಕ್ಕೆ ನಿಲ್ಲದು. ಇದು ನಿರಂತರವಾಗಿ ಮುಂದುವರಿಯಲಿದೆ ಎಂದರು.
ಸಂಸ್ಥೆಯ ಹಿರಿಯ ಉಪನ್ಯಾಸಕ ರಾಜೇಶ ಚಿಟಗುಪ್ಪಿ, ಸ್ಪರ್ಧಾ ಸ್ಪರ್ಧಾ ಸ್ಫೂರ್ತಿ ಪ್ರಕಾಶಕರಾದ ಶ್ರೀಮತಿ ರೇಣುಕಾ ಎಲ್ ಉಪ್ಪಾರ, ಸ್ಪರ್ಧಾ ಸ್ಫೂರ್ತಿ ಹಿರಿಯ ಸಂಪಾದಕ ಎಚ್ ಆರ್ ವಸ್ತ್ರದ, ಮಂಜುನಾಥ ಮಠಪತಿ, ಮಂಜುನಾಥ ದಾಸ್ತಿಕೊಪ್ಪ, ಪಾಂಡುರಂಗ ಅಗ್ನಿಹೋತ್ರಿ, ಸಂಜೀವ ಹಿರೇಮಠ, ಸುಜಾತಾ ಪಿ. ಮುಂತಾದವರಿದ್ದರು. ಬಸವರಾಜ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು.