ಅಂಗವೈಕಲ್ಯರ (ಚೇತನರಿಗೆ) ಕೈ ಹಿಡಿದ ನರೇಗಾ

ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ: ಅಂಗವಿಕಲತೆಯನ್ನು ಮೀರಿ ನಿಂತು ಕೆಲಸದಲ್ಲಿ ಇತರರೊಂದಿಗೆ ಸರಿ ಸಮಾನವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮುನ್ನಗ್ಗಬೇಕು ಎಂಬ ಛಲದಿಂದ  ಬದುಕನ್ನು ಸವಾಲಾಗಿ ತೆಗೆದುಕೊಳ್ಳುವ ಬದಲಾಗಿ ಬದುಕಿಗೆ ಸವಾಲು ಒಡ್ಡುವ ರೀತಿಯಲ್ಲಿ ಇವರ ಮನೋಭಾವ ಇವರ ಕಾಯಕ ಸ್ಪೂರ್ತಿಗೆ ಮತ್ತು ಸ್ವಾಭಿಮಾನ ಮಾರ್ಗ ಇಂತಹ ಅನೇಕರಿಗೆ ಚೈತನ್ಯ ನೀಡುವಂತಿದೆ ದುಡಿಯುವ ಶಕ್ತಿ  ಇದ್ದವರೇ ನೆಪ ಹೇಳಿಕೊಂಡು ಮೈ ಬಾಗಿಸಿ ದುಡಿಯಲಾರದೆ ಸೋಮಾರಿಗಳಾಗಿ ಕಾಲ ಕಳೆಯುವ ಯುವಕರ ನಡುವೆ ಈ ಅಂಗವೈಕಲ್ಯರ ಭರವಸೆಯ ತಾರೆಯಂತೆ ಕಾಣುತ್ತಾರೆ ಮತ್ತು ನರೇಗಾ ಯೋಜನೆಯಲ್ಲಿ ವಿಶೇಷಚೇತನರಿಗೆ ಸಹ ಕೆಲಸ ಮಾಡಲು ಅವಕಾಶ ನೀಡಿದ ಸರ್ಕಾರ ಕೆಲಸದಲ್ಲಿ ಶೇ 50 ರಿಯಾಯಿತಿ ಜೊತೆಗೆ ಪೂರ್ಣಪ್ರಮಾಣದಲ್ಲಿ ಕೂಲಿಯೂ ದೊರೆಯುತ್ತದೆ ಹಾಗಾಗಿ ಪ್ರತಿನಿತ್ಯ ಖುಷಿ ಖುಷಿಯಿಂದ ಬಂದು ಕೆಲಸ ಮಾಡುತ್ತಿದ್ದೆನೆ ಜೀವನ ನಿರ್ವಹಣೆಗೆ ನರೇಗ ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಹೇಳಿದರು.
 ಯಾವುದೇ ಕೆಲಸ ಮಾಡದೆ ಮನೆಯಲ್ಲಿ ಕುಳಿತುಕೊಂಡು ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾಗ ನೆರವಿಗೆ ಬಂದಿದ್ದು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಈ ಯೋಜನೆ ಬಳಸಿಕೊಂಡು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದಲ್ಲಿ ತೊಡಗಿದ್ದೇನೆ.
 ತಾಲೂಕಿನ ರಾರಾವಿ ಗ್ರಾ.ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆದ ಸಮುದಾಯ ಕಾಮಗಾರಿ ವೇಳೆ ಕೆಲಸ ಮಾಡೋವಗ ಗೋಸಿ ಚಂದ್ರ(33) ಅವರನ್ನು ಮಾತನಾಡಿಸಿದಾಗ ಹೇಳಿದ ಮಾತುಗಳು ಹುಟ್ಟಾತಾ ಅಂಗವಿಕಲನಾಗಿ ಅಗಿದ್ದು ತಂದೆ ತಾಯಿಗೆ ಭಾರ ಅಗದೆ, ನಾನು ಅಂಗವೀಕಲ  ಜೊತಗೆ ನನ್ನ ಹೆಂಡತಿ ಅಂಗವಿಲಕತೆ ಹೊಟ್ಟೆ ಪಾಡು ನಡೆಯೊದ್ದು ಬಾಳಕಷ್ಟ ಐತ್ರಿ ನಾನು ಒಬ್ಬನೇ ಅಗಿದ್ದರೆ ಏನಾದರೂ ಮಾಡಿ ಬದುಕಬಹುದು ನನ್ನ ಹೆಂಡತಿ ,ಮಕ್ಕಳನ್ನು ಕಟ್ಟಿಕೊಂಡು ನಮ್ಮ ಸಂಸಾರ ನಡೆಸಿಕೊಂಡು ಹೊಂಟಿನಿ ಅದಕ್ಕೆ ಸಹಾಯ ಅಗಿದ್ದು ಈ ಉದ್ಯೋಗ ಖಾತ್ರಿ ಯೋಜನೆಯಾಗಿದೆ,
 ರಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿನಿತ್ಯ 34 ಕ್ಕೂ ಹೆಚ್ಚು ವಿಶೇಷಚೇತನರು ನರೇಗದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ ಯಾವುದೇ ಕೆಲಸ ಮಾಡದೆ ಮನೆಯಲ್ಲಿ ಕುಳಿತುಕೊಂಡು ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾಗ ನೆರವಿಗೆ ಬಂದಿದ್ದುಮತ್ತು ನಮ್ಮ ಬದುಕಿಗೆ  ಆಸೆರೆಯಾಗಿದ್ದು ಉದ್ಯೋಗ ಖಾತ್ರಿ ಯೋಜನೆ ಎಂದು ತಿಳಿಸಿದರು.
ಕೊಟ:-  “ನಮ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿಶೇಷಚೇತನರು 34ಕ್ಕೂ ಹೆಚ್ಚು ಜನರು ನರೇಗ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಶೇ 50 ರಿಯಾಯಿತಿ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಕೂಲಿಯು ದೊರೆಯುತ್ತದೆ ಅದ್ದರಿಂದ ಈ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಸದುಪಯೋಗ ಪಡೆದುಕೊಳ್ಳಿ ಎಂದು ರಾರಾವಿ ಲೀಲಾವತಿ ಬಂಡೂರಿ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಹೇಳಿದರು.”