ಅಂಗವಿಕಲ ಮಕ್ಕಳ ಪಾಲನೆ ನಮ್ಮ ಅದೃಷ್ಠ : ಮನೋಹರ ಹೊಳಕರ

ಭಾಲ್ಕಿ: ಡಿ.15:ಅಂಗವಿಕಲ ಮಕ್ಕಳ ಪಾಲನೆ ಪೋಷಣೆ ಪಾಲಕರಾದ ನಮ್ಮ ಅದೃಷ್ಠವೆಂದು ಭಾವಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಹೋಹರ ಹೊಳಕರ ಹೇಳಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ, ವಿಶ್ವ ಅಂಗವಿಕಲ ಮಕ್ಕಳ ದಿನಾಚರಣೆ ನಿಮಿತ್ಯ ಬುಧವಾರ ನಡೆದ ಅಂಗವಿಕಲ ಮಕ್ಕಳ ಪರಿಕರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜೀವನವೆಂದರೆ ಕರ್ಮಫಲಗಳ ಆಸ್ವಾದನೆಯಾಗಿದೆ, ನಮಗೆ ಹುಟ್ಟಿದ ಅಂಗವಿಕಲ ಮಕ್ಕಳ ಸೇವೆ ನಮ್ಮ ಕರ್ಮಫಲದ ನಿರ್ಮೂಲನೆ ಎಂದು ಭಾವಿಸಿ, ಅವರಲ್ಲಿ ಆತ್ಮವಿಸ್ವಾಸ ತುಂಬುವ ಕಾರ್ಯಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ, ಅಂಗವಿಕಲ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕು. ದೇಹದ ಯಾವುದೇ ಒಂದು ಭಾಗ ಊನವಾದರೆ ಇನ್ನೊಂದು ಭಾಗದಲ್ಲಿ ಅಧಿಕಶಕ್ತಿ ಇರುತ್ತದೆ. ಹೀಗಾಗಿ ಅಂಗವಿಕಲ ಮಕ್ಕಳು ಧೈರ್ಯಗೆಡದೇ ವಿದ್ಯಾಭ್ಯಾಸ ಮಾಡಿ ಮುಂದಿನ ಜೀವನ ಸಾಗಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ ಮಾತನಾಡಿ, ಅಂಗವಿಕಲ ಮಕ್ಕಳು ಶಾಪವಲ್ಲ, ಅವರು ನಮಗೆ ವರವಾಗಿದ್ದಾರೆ. ಅವರ ಸೇವೆಯಲ್ಲಿ ಸಂಸ್ತøಪ್ತಿ ಕಾಣಬೇಕು ಎಂದು ಹೇಳಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೆಪ್ಪ ಪಾಟೀಲ ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ, ಪ್ರಮುಖರಾದ ವಿಮಲಾ ಮೋರೆ, ದತ್ತು ಕಾಟಕರ, ಬಾಲಾಜಿ ಕಾಂಬಳೆ, ಜಯರಾಜ ದಾಬಶೆಟ್ಟಿ, ಸಂತೋಷ ಸ್ವಾಮಿ, ಚಂದ್ರಕಾಂತ ತಳವಾಡೆ, ಬಾಲಾಜಿ ಕಾಂಬಳೆ, ಸಂತೋಷ ಮುದಾಳೆ, ಭುವನೇಶ್ವರ ಬಿರಾದಾರ, ಚನ್ನಪ್ಪ, ಆನಂದ ಹಳೆಂಬರೆ ಉಪಸ್ಥಿತರಿದ್ದರು.
ಸಿಆರ್‍ಪಿ ಭುವನೇಶ್ವರ ಸ್ವಾಗತಿಸಿದರು. ಚಂದ್ರಕಾಂತ ತಳವಾಡೆ ನಿರೂಪಿಸಿದರು. ದತ್ತು ಕಾಟಕರ ವಂದಿಸಿದರು.