ಅಂಗವಿಕಲ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ ಧಾಯಗೋಡೆ ನೇಮಕ

ಕಲಬುರಗಿ,ಆ.3-ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಸಂತೋಷ ಧಾಯಗೋಡೆ ಅವರನ್ನು ನೇಮಕ ಮಾಡಿ ಸಂಘದ ರಾಜ್ಯಾಧ್ಯಕ್ಷರಾದ ಇಂದ್ರೇಶ.ಆರ್. ರವರು ಆದೇಶ ಹೊರಡಿಸಿರುತ್ತಾರೆ.
ಈ ಪ್ರಯುಕ್ತ ನಗರದ ರಾಜ ರಾಜೇಶ್ವರಿ ಹೊಟೆಲ್‍ನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ದಿಲೀಪಸಿಂಗ ಅವರಿಗೆ ಹೃದಯಸ್ಪರ್ಷಿ ಬಿಳ್ಕೊಡುಗೆ ಸಮಾರಂಭ ಹಾಗೂ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸಂತೋಷ ಧಾಯಗೋಡೆ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಸಂಘದ ಜಿಲ್ಲಾ ಗೌರವಾಧ್ಯಕ್ಷರಾದÀ ಶಾಂತಪ್ಪ ಸಂಗಾವಿ ಅವರು ಸಂಘದ ಬೆಳವಣಿಗೆ, ದಿಲೀಪಸಿಂಗ ಅವರ ಸೇವೆ ಹಾಗೂ ಸಂಘಟನೆಯನ್ನು ಬಲಿಷ್ಠಗೊಳಿಸುವ ಸಂಬಂಧ ಮಾಡಬೇಕಾದ ಕಾರ್ಯಗಳ ಬಗ್ಗೆ ಕೂಲಂಕುಷವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚಂದಾಪೂರ, ಖಜಾಂಚಿ ವಿವೇಕಾನಂದ ಗಡಬಳ್ಳಿ, ಜಂಟಿ ಕಾರ್ಯದರ್ಶಿ ಲಾಲಮಹಮದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಪಿ.ಸುಳ್ಳದ್, ಮಹಾದೇವಪ್ಪ ಜಮಾದಾರ, ದೇವಪ್ಪ ನಂದೂರಕರ್, ರಾಜೇಶ ಕೆ.ಜೆ, ಸಂಜೀವಕುಮಾರ, ಜಗನ್ನಾಥ ಮೋರೆ, ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ತಾಲೂಕಿನ ಅಧ್ಯಕ್ಷರು/ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷÀ ಡಾ.ಗಿರಿಮಲ್ಲ.ಕೆ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಗುರುರಾಜ ಅವರು ವಂದಿಸಿದರು.