ಅಂಗವಿಕಲ ನೌಕರರ ಸಂಘದ ತಾಲೂಕ ಅಧ್ಯಕ್ಷರಾಗಿ ಮೋರೆ ಪುನರಾಯ್ಕೆಜಗನ್ನಾಥ ಮೋರೆಗೆ ಗುರು ಬಳಗದಿಂದ ಸನ್ಮಾನ

ಅಫಜಲಪುರ:ನ.20: ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಎರಡನೇಯ ಅವಧಿಗೆ ಆಯ್ಕೆಗೊಂಡಿರುವ ಜಗನ್ನಾಥ ಮೋರೆ ಅವರಿಂದ ಸಂಘದ ಬೆಳವಣಿಗೆಗೆ ಇತರೆ ಮಾದರಿ ಕಾರ್ಯಗಳು ನಡೆಯಲಿವೆ ಎಂದು ಶಿಕ್ಷಕರಾದ ಗಿರೆಪ್ಪ ಕನ್ನೂರ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಗುರು ಬಳಗದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಾವೆಲ್ಲರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಸಹ ನಾವು ಯಾವತ್ತೂ ಜಗನ್ನಾಥ ಮೋರೆ ಅವರ ಸಲಹೆ ಹಾಗೂ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದವು.ಶಿಕ್ಷಕ ಎಂಬ ವೃತ್ತಿ ಅತ್ಯಂತ ಪವಿತ್ರವಾಗಿದ್ದು.ಈ ಹುದ್ದೆಗೆ ಮೋರೆ ಶಿಕ್ಷಕರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವುದರ ಜತೆಗೆ ಎರಡನೇ ಅವಧಿಗೆ ಅಂಗವಿಕಲ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರೋದು ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ.ಅವರಿಂದ ಅಂಗವಿಕಲ ನೌಕರರಾಗುವ ಅನ್ಯಾಯಗಳನ್ನು ಹೋರಾಟದ ಹೆಜ್ಜೆ ಇಡುವ ಮೂಲಕ ಸರ್ಕಾರದ ಸೌಲಭ್ಯಗಳ ಲಾಭ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಅವರಿಂದ ಸದಾಕಾಲ ನಡೆಯುತ್ತದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಗನ್ನಾಥ ಮೋರೆ ನನ್ನ ವೃತ್ತಿ ಜೀವನದಲ್ಲಿ ಯಾವತ್ತೂ ಸಹ ವೃತ್ತಿಗೆ ದ್ರೋಹ ಮಾಡದೆ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ.ಇದಕ್ಕೆಲ್ಲ ನನ್ನ ಸಹಪಾಠಿ ಶಿಕ್ಷಕರು ಸಾಕಷ್ಟು ಸಹಕಾರವನ್ನು ನೀಡಿದ್ದಾರೆ.ಇವತ್ತು ನಾನು ಅಧ್ಯಕ್ಷನಾಗಿ ಎರಡನೇ ಬಾರಿಗೆ ಎಲ್ಲರೂ ಸೇರಿ ಆಯ್ಕೆ ಮಾಡಿದ್ದಾರೆ.ಹೀಗಾಗಿ ನನ್ನ ಕೈಲಾದಷ್ಟು ಈ ಹುದ್ದೆಯಲ್ಲಿ ಇದ್ದುಕೊಂಡು ಅಂಗವಿಕಲ ನೌಕರರ ಮೇಲೆ ಆಗುತ್ತಿರುವ ಅನ್ಯಾಯಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ಅಶೋಕ ದೇಸಾಯಿ,ನಾರಾಯಣ ಅಂಬೂರೆ,ಶಂಕರ ನಾವಿ,ದೇಸು ಚವ್ಹಾಣ,ಮಾರುತಿ ಸುತಾರ,ಹಿರೋಜರಾಯ ಪಾಟೀಲ್,ಮಾಣಿಕರಾವ ಕುಲಕರ್ಣಿ,ಗುರುಲಿಂಗಪ್ಪ ಪ್ರಧಾನಿ,ಶಿವಾನಂದ ರೇವೂರ,ಗಂಗಾಧರ ಐಕೂರ, ಬಸವರಾಜ ಕುಂಬಾರ,ಗುರಪ್ಪ ಕಾಳಿ,ಗುರುಸಿದ್ದಯ್ಯ ನಂದಿಮಠ,ಲಕ್ಷ್ಮಣ ಝಳಕಿ,ದ್ಯಾವಮ್ಮ ನಾಯ್ಕೊಡಿ,ಶೋಭಾ ಮೋರೆ,ಪವಿತ್ರ ಮೋರೆ,ಮೌನೇಶ ಸುತಾರ ಇತರರಿದ್ದರು.