ಅಂಗವಿಕಲೆಗೆ ಸಹಾಯ ಮಾಡಿದ ತಿಪ್ಪೇಸ್ವಾಮಿ

ಕೊಟ್ಟೂರು ಏ 26 : ಇಂದು ಬೆಳಿಗ್ಗೆ ಕೊಟ್ಟೂರು ಪಕ್ಕದ ಕೆ ಐಯ್ಯನಹಳ್ಳಿ ಗ್ರಾಮದ ಒಬ್ಬ ಅಂಗವಿಕಲ ಅಜ್ಜಿ ತನ್ನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ತಾಲ್ಲೂಕು ಕಛೇರಿಗೆ ಹೋಗಿದ್ದಾಗ ಅಲ್ಲಿನ ನೌಕರರು ಸ್ಪಂದಿಸದೇ ಕೊನೆಗೆ ಬೇಜಾರಾಗಿ ದಾರಿಯಲ್ಲಿ ನಡೆಯಲು ಕೂಡ ಆಗದ ಪರಿಸ್ಥಿತಿಯಲ್ಲಿ
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾತಿಪ್ಪೇಸ್ವಾಮಿವೆಂಕಟೇಶ ನಿವಾಸದ ಹತ್ತಿರ ಬಂದಾಗ ಸ್ಪಂದಿಸಿ
ವಸ್ತು ಸ್ಥಿತಿ ಕೇಳಿಕೊಂಡು ತಕ್ಷಣವೇ ಆ ಗ್ರಾಮದ ಗ್ರಾಮ ಲೆಕ್ಕಿಗರಾದ ಶಾರದ ರವರನ್ನು ಕರೆಸಿ ಸ್ಥಳದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಮಾಡಿಸಲಾಯಿತು ಮತ್ತು ಆ ಅಜ್ಜಿಗೆ ಮಕ್ಕಳಿದ್ದರೂ ಅವರನ್ನು ಆರೈಕೆಯಾಗಲಿ, ನೋಡಿಕೊಳ್ಳುವುದಾಗಲಿ ಮಾಡುತ್ತಿಲ್ಲ ಆದ್ದರಿಂದ ಅಜ್ಜಿಯನ್ನು ಕರೋನ ಪರೀಕ್ಷೆ ಮಾಡಿಸಿ ಇಲ್ಲಿನ ವೃದ್ಧಾಶ್ರಮಕ್ಕೆ ಸೇರಿಸಿದರು