ಅಂಗವಿಕಲರಿಗೆ ಲಸಿಕೆ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು,ಏ.೨೭- ಅಂಗವಿಕಲರಿಗೆ ಕೊರೊನಾ ಲಸಿಕೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಹೈಕೋರ್ಟ್, ಅಂಗವಿಕಲರಿಗೆ ಲಸಿಕೆ ನೀಡಬೇಕು. ಲಸಿಕೆ ಕಾರ್ಯಕ್ರಮ ಅಥವಾ ವ್ಯವಸ್ಥೆ ಮಾಡಿ. ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿ. ಮನಗೆ ಹೋಗಿ ಅಂಗವಿಕಲರಿಗೆ ಲಸಿಕೆ ಹಾಕಿ ಎಂದು ಸೂಚಿಸಿದೆ.

ಅಂಗವಿಕಲರ ಹಕ್ಕುಗಳ ಕಾಯ್ದೆ ೨೦೧೬ರ ಸೆಕ್ಷನ್ ೮ರ ಪ್ರಕಾರ ತುರ್ತು ಪರಿಸ್ಥಿತಿ, ವಿಕೋಪಗಳ ಸಂದರ್ಭದಲ್ಲಿ ಸಮಾನ ರಕ್ಷಣೆ ಮತ್ತು ಸುರಕ್ಷತೆ ಇರಬೇಕು. ಸೆಕ್ಷನ್ ೨೫ರ ಪ್ರಕಾರ ಉಚಿತ ಆರೋಗ್ಯ ರಕ್ಷಣೆ, ತಡೆಮುಕ್ತ ಪ್ರವೇಶ, ಚಿಕಿತ್ಸೆಗೆ ಆದ್ಯತೆ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಅಂಗವಿಕಲರಿಗೆ ಮತ್ತು ಅವರಿಗೆ ಆರೈಕೆ ಮಾಡುವವರಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ಕೋರಿದರು.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಕೊರೋನಾ ಲಸಿಕೆಗಾಗಿ ಸಾಲು ಸಾಲಾಗಿ ನಿಲ್ಲುವುದನ್ನು ತಪ್ಪಿಸಿ ಎಂದು ತಿಳಿಸಿದೆ.