ಅಂಗವಿಕಲರಿಗೆ ಆಹಾರ ಭದ್ರತೆ ಒದಗಿಸಲು ಆಗ್ರಹಿಸಿ ಮನವಿ

ಚಿಂಚೋಳಿ,ಏ.27- ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಸದಸ್ಯರ ನಿಯೋಗವು ಇಲ್ಲಿನ ಪುರಸಭೆ ಅಧಿಕಾರಿಗಳಿಗೆ ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಚಿಂಚೋಳಿ ತಾಲೂಕ ಮತ್ತು ಪಟ್ಟಣದಲ್ಲಿ ಕೋವಿಡ್-19 ಎರಡನೆ ಅಲೆಯ ಸೋಂಕು ತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಮಾಡಿದ್ದು, ತಕ್ಷಣವೇ ಅಂಗವಿಕಲರಿಗೆ ಆಹಾರ ಭದ್ರತೆಯನ್ನು ಒದಗಿಸಬೇಕು ಸಮಸ್ತ ಅಂಗವಿಕಲರಿಗೆ ಹಾಲು ಹಣ್ಣು ಮತ್ತು ರೇಷನ್ ಕೀಟಗಳನ್ನು ಉಚಿತವಾಗಿ ಸರ್ಕಾರದ ವತಿಯಿಂದ ವಿತರಿಸಬೇಕು ಎಂದು ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಅಧ್ಯಕ್ಷರಾದ ಮಂಜೂರು ಅಹ್ಮದ್ ಅವರು ಪುರಸಭೆ ಅಧಿಕಾರಿಗಳಾದ ಚಂದ್ರಕಾಂತ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಅಶೋಕ ಕಟ್ಟಿಮನಿ. ವೀರಶೆಟ್ಟಿ ಗಾರಂಪಳ್ಳಿ. ಅರುಣ ಕುಮಾರ ಮಡಿವಾಳ. ಮಲ್ಲಿಕಾರ್ಜುನ. ಮತ್ತು ಅನೇಕ ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಸದಸ್ಯರು ಇದ್ದರು.