ಅಂಗವಿಕಲರಿಂದ ಬೈಕ ರ್ಯಾಲಿ

ಚನ್ನಮ್ಮನ ಕಿತ್ತೂರ,ಏ20: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜೀ ವರ್ತುಳದಲ್ಲಿ ತಾ.ಪಂ ಸಂಯುಕ್ತಾಶ್ರಯಲ್ಲಿ ಸಾರ್ವಜನಿಕರಿಗೆ ಚುನಾವಣೆ ಅರಿವು ಮೂಡಿಸಲು ಅಂಗವಿಕಲರಿಂದ ಬೈಕ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಈ ಬೈಕ್ ರ್ಯಾಲಿಯಲ್ಲಿ ಮತದಾನವೆಂಬುವುದು ಪ್ರತಿಯೊಬ್ಬ ನಾಗರಿಕನ ಅತ್ಯಂತ ಪವಿತ್ರವಾದ ಕರ್ತವ್ಯವಾಗಿದೆ. ಆಮಿಷಕ್ಕೆ ಮರುಳಾಗದಿರಿ, ಯೋಚಿಸಿ ಮತ ಚಲಾಯಿಸಿ, ಪ್ರತಿಯೊಬ್ಬರ ಮತವು ಅಮೂಲ್ಯ, ತಪ್ಪದೇ ಮತ ಚಲಾಯಿಸಿ, ಮತದಾನ ನಿಮ್ಮ ಹಕ್ಕು ಮತ್ತು ನಿಮ್ಮ ಜವಾಬ್ದಾರಿ, ನಿಮ್ಮ ಮತ ನಿಮ್ಮ ಭವಿಷ್ಡ ಎಂದು ಘೋಷಣೆ ಕೂಗುತ್ತಾ ಗುರುವಾರ ಪೇಟೆ ಅರಳಿಕಟ್ಟಿ ಮಾರ್ಗವಾಗಿ ಬೈಕ ರ್ಯಾಲಿ ಐತಿಹಾಸಿಕ ಚನ್ನಮ್ಮನ ಕೋಟೆಗೆ ತಲುಪಿ ಅಂತ್ಯಗೊಂಡಿತು.
ಈ ವೇಳೆ ತಾ.ಪಂ ದ್ವಿದರ್ಜೆ ಸಹಾಯಕ ಟಿ.ಆಯ್ ಕಾದ್ರೋಳಿ, ಸಂಚಾಲರು ಶ್ರೀಮತಿ ಶಿವಲಿಲಾ ಜವಳಿ, ಬಿಎಫ್‍ಟಿ ಬಸವರಾಜ ಹೊಮನಿ, ಸದ್ದಾಮ್ ದಾದೆಬಾಯಿ, ಮಂಜುನಾಥ ಅಗಸರ, ವಿಕಲಾಂಗಚೇತನರುಗಳಾದ ಪತ್ರಕರ್ತ ಕಲ್ಲಪ್ಪಾ ಅಗಸಿಮನಿ, ದೇಗಾಂವದ ರಮೇಶ, ಕುಲವಳ್ಳಿಯ ವಿಠ್ಠಲ, ಫಕ್ಕೀರಗೌಡ ಪಾಟೀಲ,ಸಾರ್ವಜನಿಕರು, ತಾ.ಪಂ ಸಿಬ್ಬಂದಿ ಸೇರಿದಂತೆ ಇನ್ನಿತರರಿದ್ದರು.