ಅಂಗವಿಕಲತೆ ಮತದಾನಕ್ಕೆ ಅಡ್ಡಿಯಾಗದಿರಲಿ- ಸತೀಶ್


ಸಂಜೆವಾಣಿ ವಾರ್ತೆ
ಸಂಡೂರು: ಏ:7:  ಸಂಡೂರು :ಮತದಾನದ ಹಕ್ಕು ಎಲ್ಲರಿಗೂ ಇದೇ, ಅದಕ್ಕೆ ಅಂಗವೈಕಲ್ಯತೆ ಅಡ್ಡಬರದಿರಲಿ, ಯಾರಿಗೆ ಮತಗಟ್ಟೆಗೆ ಬಂದು ಮತಹಾಕಲು ಅವಕಾಶವಿದೆ ಅವರು ಕಡ್ಡಾಯವಾಗಿ ಮತದಾನ ಮಾಡಿ, ಅಗದವರಿಗೆ ಸೂಕ್ತ ವ್ಯವಸ್ಥೇ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಸತೀಶ್ ಕರೆನೀಡಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ಅಂಗವಿಕಲರು ತ್ರಿಚಕ್ರವಾಹನಗಳ ಮೂಲಕ ಮತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಮತದಾನ ಎನ್ನುವುದು ನಮ್ಮ ಕರ್ತವ್ಯವಾಗಿದೆ, ಅದನ್ನು ಪ್ರತಿಯೊಬ್ಬರೂ ಸಹ ಮಾಡಬೇಕು, ಅದರ ಜೊತೆಗೆ ನಿಮ್ಮ ಸುತ್ತಲಿನವರನ್ನು ಸಹ ಮತದಾನ ಮಾಡುವಂತೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿರಿ, ಮತದಾನ ಜಾಗೃತಿ ಮೂಡಿಸುತ್ತಿರುವ ವಿಕಲಾಂಗ ಚೇತನರು ಮಹಾನ್ ಚೇತನರು ಮತದಾನ ಜಾಗೃತಿ ಮೂಡಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ಕಾರ್ಯವನ್ನು ಮಾಡುತ್ತಿರುವ ವಿಕಲಾಂಗ ಚೇತನರ ಕಾರ್ಯ ಶ್ಲಾಘನೀಯ. ಲೋಕಸಭಾ ಚುನಾವಣೆ ಪ್ರಯುಕ್ತ ಸ್ವಿಪ್ ಸಮಿತಿ ಸಂಡೂರು ವತಿಯಿಂದ ದಿನಾಂಕ: 06.04.2024 ರಂದು ಏರ್ಪಡಿಸಲಾಗಿದ್ದ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ (ಬೈಕ್) ಮತದಾನ ಜಾಗೃತಿ ಜಾಥಕ್ಕೆ ಹಸಿರು ಬಾವುಟ ಹಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸುಭದ್ರ ದೇಶದ ಭವಿಷ್ಯಕ್ಕಾಗಿ ಪ್ರಜೆಗಳೆ ಪ್ರಭುಗಳು ಆಗಿದ್ದೀರಿ ಆದಕಾರಣ ಪ್ರಜೆಗಳು ಯಾವುದೆ ಆಮೀಷಕ್ಕೆ ಒಳಗಾಗದೆ ಮತದಾನ ಮಾಡಿ ಎಂದು ಹೇಳಿದರು
ಪುರಸಬೆ ಮುಖ್ಯ ಅಧಿಕಾರಿಗಳಾದ ಜಯಣ್ಣ. ಶಿಶು ಅಬಿವೃದ್ಧಿ ಯೋಜನೆ ಅಧಿಕಾರಿಗಳಾದ ಎಲೆ ನಾಗಪ್ಪ. ಸಹಾಯಕ ನಿರ್ದೇಶಕರಾದ ವೆಂಕಟೇಶ್. ವಿಕಲಚೇತನರ ವಿಭಾಗದಿಂದ ಎಂ. ಆರ್. ಡಬ್ಲ್ಯೂ. ಸಿ ಕರಿಬಸಜ್ಜ. ಹಾಗೂ ಎಲ್ಲಾ ವಿ.ಆರ್.ಡಬ್ಲ್ಯೂ. ಮತ್ತು ಯು.ಆರ್.ಡಬ್ಲ್ಯೂ. ಕಾರ್ಯಕರ್ತರು ಭಾಗಿಯಾಗಿ ಈ ಜಾಥ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಈ ಜಾಥ ತಾಲೂಕು ಪಂಚಾಯಿತಿಯಿಂದ ಚಾಲನೆಗೊಂಡು ತಾಲೂಕು ಕಚೇರಿಗೆ ತೆರಳಿ ವಿಜಯ ಸರ್ಕಲ್ ಗೆ ತಲುಪಿ ನಂತರ ಕೃಷ್ಣನಗರ ಗ್ರಾಮದ ಬಿ ಕೆ ಜಿ ಶಾಲೆ ತಲುಪಿ ನಂತರ ಪುರಸಭೆ ಬಸ್ ನಿಲ್ದಾಣದ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮುಖಾಂತರದಿಂದ ಅರಣ್ಯ ಇಲಾಖೆ ಕಚೇರಿವರಿಗೆ ತಲುಪಿ ,
ಪುರಸಭೆ ಬಸ್ ನಿಲ್ದಾಣದಲ್ಲಿ ಜಾಗೃತಿ ಮಾಹಿತಿ ನೀಡಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರಾದ ಷಡಕ್ಷರಯ್ಯ ಹೆಚ್ ಅವರು ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತಚಲಾಯಿಸಿ ಹಾಗೂ ವಿಕಲಚೇತನರು ಸಹ ಮತಗಟ್ಟೆಗೆ ಬಂದು ಮತಚಲಾಯಿಸಲು ಸಮಂಜಸ ಸೌಕರ್ಯ ಕಲ್ಪಿಸಲಾಗಿದೆ. ರಾಂಫ್ಸ್ . ರೈಲಿಂಗ್ .ವ್ಹೀಲ್ ಚೇರ್ .ಬೂತ್ ಕನ್ನಡಿ. ವಿಕಲಚೇತನರಿಗೆ ಸಾರಿಗೆ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು. ಮನೆಯಿಂದ ಬಂದು ಮತ ಹಾಕದೆ ಇರುವವರಿಗೆ 12 ಡಿ ನಮೂನೆ ಕೊಟ್ಟು ಮತಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು. ನಂತರ ಈ ಜಾಥ ತಾಲೂಕು ಪಂಚಾಯಿತಿ ತಲುಪಿದ ನಂತರ ಸ್ವೀಪ್ ಸಮಿತಿ ಅಧ್ಯಕ್ಷರಾದ ಷಡಕ್ಷರಯ್ಯ ಹೆಚ್ ಇವರು ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಭೋದಿಸಿ ಜಾಥ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು..
ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಳೆನಾಗಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ಪುರಸಭೆಯ ಅಧ್ಯಕ್ಷ ಜಯಣ್ಣ ಹಾಗೂ ತಾಲೂಕಿನ ಬಹಳಷ್ಟು ಅಂಗವಿಕಲರು ತಮ್ಮ ತ್ರಿಚಕ್ರವಾಹನಗಳ ಮೂಲಕ ಅಗಮಿಸಿ ಪ್ರತಿಜ್ಞೆಯನ್ನು ಸ್ವೀಕರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮ್ಮ ವಾಹನಗಳ ಮೂಲಕ ಸಾಗಿ ಮತದಾನದ ಜಾಗೃತಿಯನ್ನು ಮೂಡಿಸಿದರು.