ಅಂಗವಾಡಿ ಕೇಂದ್ರ : ಹೂ ನೀಡಿ ಸ್ವಾಗತಿಸಿದ ತಹಶೀಲ್ದಾರ್

ಸಿರವಾರ.ನ.೯-ರಾಜ್ಯಾದ್ಯಂತ ಇಂದಿನಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಆಗಮಿಸಲು ಒಪ್ಪಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿರುವ ವಿವಿಧ ಕೇಂದ್ರಗಳಿಗೆ ತಹಶೀಲ್ದಾರ ವಿಜಯೇಂದ್ರಹುಲಿನಾಯಕ, ಸಿಡಿಪಿಓ ಮುದುಕಪ್ಪ ಅವರು ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು. ನಂತರ ಮಾತನಾಡಿದ ವಿಜಯೇಂದ್ರ ಹುಲಿನಾಯಕ ಅಪೌಷ್ಠಿಕ ನಿವಾರಣೆ, ಶಾಲಾಪೂರ್ವ ಶಿಕ್ಷಣ ಕೊಡಿಸುವ ಮೂಲಕ ಮುಂದಿನ ಶೈಕ್ಷಣಿಕ ಜೀವನಕ್ಕೆ ಭದ್ರಬುನಾಧಿಯನ್ನು ಒದಗಿಸುತ್ತದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಅಧಿಕವಾಗಿದೆ ಎಂದರು. ಪ.ಪಂ ನಾನಿರ್ದೇಶಕ ಸದಸ್ಯ ಮಹೇಸ ಪಾಟೀಲ್, ಅಂಗನವಾಡಿ ಮೇಲ್ವಿಚರಕಿಯರು, ಕಾರ್ಯಕರ್ತರು ಇದ್ದರು.