ಅಂಗನವಾಡಿ ಸಂಘದ ಅಧ್ಯಕ್ಷೆ ಚನ್ನಮ್ಮ ನಿವೃತ್ತಿ

ಮಾನ್ವಿ,ಆ.೦೧ – ತಾಲೂಕ ಅಂಗನವಾಡಿ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾಗಿದ್ದು ಚನ್ನಮ್ಮ ಇವರು ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಅವರ ಸಹೋದ್ಯೋಗಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಅವರನ್ನು ಪ್ರೀತಿ ಪೂರ್ವಕವಾಗಿ ಸನ್ಮಾನಿಸಿ ಬಿಳ್ಕೋಡಿಯನ್ನು ಮಾಡಿದರು..
ನಂತರ ತಾಲೂಕ ಅಧಿಕಾರಿ ಮನ್ಸೂರ್ ಅಹಮದ್ ಮಾತಾನಾಡಿ ಚನ್ನಮ್ಮ ಇವರು ಕಳೆದ ೩೭ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಅಚ್ಚುಕಟ್ಟಾಗಿ ಕೆಲಸವನ್ನು ಮಾಡಿದ್ದಾರೆ ಇವರನ್ನು ಆದರ್ಶವಾಗಿಟ್ಟುಕೊಂಡು ಉಳಿದವರು ಕೂಡ ಅತ್ಯುತ್ತಮವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ನಂತರ ಅಂಗನವಾಡಿ ಕಾರ್ಯಕರ್ತರು ಅಧಿಕಾರಿ ವರ್ಗದವರು, ಸಂಘ ಸಂಸ್ಥೆಯವರು ಇವರನ್ನು ಸನ್ಮಾನಿಸಿದರು..
ಈ ಸಂದರ್ಭದಲ್ಲಿ ಗಿಲ್ಲೆಸೂಗುರು ಸಿಡಿಪಿಓ ಮಹೇಶ,ಮೇಲ್ವಿಚಾರಕರಾದ ರಾಧ,ಪ್ರವೀಣ್, ನಾಗಮ್ಮ,ಚಂದ್ರಕಲಾ,ಮಲ್ಲಮ್ಮ,ಶಿವಲಕ್ಷ್ಮೀ,ಮಹಾದೇವಿ,ನಿರ್ಮಲ,ಮಲ್ಲಮ್ಮ ಸೇರಿದಂತೆ ಅನೇಕರು ಇದ್ದರು.