
ರಾಯಚೂರು, ಏ.೧೦- ತಾಲೂಕಿನ ಇಬ್ರಾಹಿಂ ದೊಡ್ಡಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದು ಅದನ್ನು ರದ್ದು ಪಡಿಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ತಾಲೂಕಿನ ಸಗಮಕುಂಟ ಗ್ರಾಮ ಪಂಚಾಯಿತಿ ಒಳಪಡುವ ಇಬ್ರಾಹಿಂದೊಡ್ಡಿ (ಶಿವಾವಿಲಾಸ ನಗರ) ಒಂದನೇ ಅಂಗನವಾಡಿ ಕೇಂದ್ರದಲ್ಲಿ ಸಾಮಾನ್ಯ ವರ್ಗದವರಿಗೆಮೀಸಲಿದ್ದ ಹುದ್ದೆಯನ್ನು ಅಕ್ರಮವಾಗಿ ಎಸ್. ಟಿ ಸಮುದಾಯದವರನ್ನು ನೇಮಕ ಮಾಡಿಕೊಂಡಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಾಮಾನ್ಯ ಕೋಟಾದಡಿ ಬರುವಂತಹ ಕೊಡುತ್ತಿದ್ದು ಅಂಗನವಾಡಿ ಶಿಕ್ಷಕಿಯರ ಹುದ್ದೆಯನ್ನು ಎಸ್.ಟಿ. ಜನಾಂಗದವರಿಗೆ ಕಾರಣ ಊರಿನ ಗ್ರಾಮಸ್ಸರ ಮತ್ತು ಸಾಮಾನ್ಯ ಜನಾಂಗದವರಿಗೆ ನೀಡಿದ್ದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅಕ್ರಮ ನೇಮಕ ರದ್ದು ಪಡಿಸಿ ವಂಚಿತ ಎಸ್. ಟಿ ಸಮುದಾಯದ ನೀಡಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಂಪಯ್ಯ, ಸುರೇಶ, ಶಂಕರಪ್ಪ, ತಾಯಪ್ಪ, ಸೇರಿದಂತೆ ಉಪಸ್ಥಿತರಿದ್ದರು.